• Slide
  Slide
  Slide
  previous arrow
  next arrow
 • ಕಿರಿಯರಲ್ಲಿ ಯಕ್ಷ ಗೆಜ್ಜೆ, ಹಿರಿಯರಲ್ಲಿ ಮಾರಿಕಾಂಬಾ ಪ್ರಥಮ

  300x250 AD

  ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ನಡೆದ  ಯಕ್ಷೋತ್ಸವ ತಾಳಮದ್ದಲೆಯ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಶಿರಸಿಯ ಯಕ್ಷಗೆಜ್ಜೆ ಹಾಗೂ ಹಿರಿಯರ ವಿಭಾಗದಲ್ಲಿ ಮಾರಿಕಾಂಬಾ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

  ಸ್ಪರ್ಧೆಯಲ್ಲಿ ಒಟ್ಟೂ 22 ತಂಡಗಳು ಜಿಲ್ಲೆಯ ಹಲವಡೆಯಿಂದ ಆಗಮಿಸಿ ಪೈಪೋಟಿ ನೀಡಿದವು. ಪ್ರಾಥಮಿಕ ಶಾಲಾ ವಿಭಾಗದಲ್ಲಿ 8 ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 14 ತಂಡಗಳು ಪಾಲ್ಗೊಂಡಿದ್ದವು.

  ಕಿರಿಯರ ವಿಭಾಗದಲ್ಲಿ ನಿರ್ಮಲಾ ಗೋಳಿಕೊಪ್ಪ‌ ನಿರ್ದೇಶನದ ಗಜಾನನ ಜನನ ತಾಳಮದ್ದಲೆ ‌ಪ್ರಥಮ, ಶಶಾಂಕ ಹೆಗಡೆ, ವಿದ್ಯಾವತಿ ಭಟ್ಟ, ಸೀತಾ ಭಟ್ಟ‌ ನಿರ್ದೇಶನದಲ್ಲಿ ಲಯನ್ಸ ಶಾಲಾ ವಿದ್ಯಾರ್ಥಿಗಳು ಪ್ರಸ್ತುತಗೊಳಿಸಿದ ನಚಿಕೇತ ಆಖ್ಯಾನ ದ್ವಿತೀಯ ಸ್ಥಾನ ಹಾಗೂ ಸುಜಾತಾ ಹೆಗಡೆ ನಿರ್ದೇಶನದ   ಸಾತ್ವಿಕ್ ಫೌಂಡೇಶನ್ ವಿದ್ಯಾರ್ಥಿಗಳ ಸುಧನ್ವಾರ್ಜುನ ತಾಳಮದ್ದಲೆ ತೃತೀಯ ಸ್ಥಾನ ಪಡೆದುಕೊಂಡಿತು.

  ಹಿರಿಯರ ವಿಭಾಗದಲ್ಲಿ ಮಾರಿಕಾಂಬಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಶಿಕ್ಷಕ ಧರ್ಮಾನಂದ ಭಟ್ಟ ನಿರ್ದೇಶನದಲ್ಲಿ ಪ್ರಸ್ತುತಗೊಳಿಸಿದ ಲವಕುಶ ತಾಳಮದ್ದಲೆ ಪ್ರಥಮ ಸ್ಥಾನ, ಕೃಷ್ಣಮೂರ್ತಿ ಹೆಗಡೆ ನಿರ್ದೇಶನದ ಭೈರುಂಬೆ ಶಾರದಾಂಬಾ ಆಂಗ್ಲ‌ಮಾಧ್ಯಮ ಪ್ರೌಢ ಶಾಲೆಯ ಮಕ್ಕಳು ನಡೆಸಿದ ಸುಧನ್ವಾರ್ಜುನ ತಾಳಮದ್ದಲೆ ದ್ವಿತೀಯ ಸ್ಥಾನ, ಅನ್ನಪೂರ್ಣ ಭಟ್ಟ ಗಡಿಗೆಹೊಳೆ ಅವರ ಭೈರುಂಬೆ  ಶಾರದಾಂಬಾ ಆಂಗ್ಲ‌ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳ ಯಜ್ಞ ರಕ್ಷಣೆ ತಾಳಮದ್ದಲೆ ತೃತೀಯ ಸ್ಥಾನ ಪಡೆಯಿತು.

  ಯಕ್ಷ ಶಾಲ್ಮಲಾದ‌ ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ಫಲಿತಾಂಶ ಪ್ರಕಟಿಸಿ ಅಂಗ್ಲ‌ಮಾಧ್ಯಮ ಶಾಲೆಗಳ‌ ಮಕ್ಕಳೂ ಕನ್ನಡ ಭಾಷೆಯ ತಾಳಮದ್ದಲೆಯಲ್ಲಿ ‌ಮಿಂಚಿದ್ದು ಗಮನ ಸೆಳೆಯುವಂತಿತ್ತು. ಹಿರಿಯರ ವಿಭಾಗದಲ್ಲಿ‌ ಮೂರೂ ಬಹುಮಾನ ಅಂಗ್ಲ‌ ಮಾಧ್ಯಮ ಶಾಲಾ ಮಕ್ಕಳಿಗೆ ಸಂದಿದೆ ಎಂಬುದು ಉಲ್ಲೇಖನೀಯ ಎಂದರು.

  300x250 AD

  ನಿರ್ಣಾಯಕರಾಗಿ ಅನಂತ ದಂತಳಿಕೆ, ಶ್ರೀನಿವಾಸ ಮತ್ತಿಘಟ್ಟ, ಮಂಜುನಾಥ ಗೊರಮನೆ, ಚಂದ್ರಕಲಾ‌ ಭಟ್ಟ ಇಡಗುಂದಿ, ಮಹಾಬಲೇಶ್ವರ ಭಟ್ಟ ಇಟಗಿ, ಪ್ರಸನ್ನ ಹೆಗ್ಗಾರು ಪಾಲ್ಗೊಂಡರು. ಅರ್ಥದಾರಿ ಎಂ.ಎನ್.ಹೆಗಡೆ ಹಲವಳ್ಳಿ, ಸುಬ್ರಾಯ ಹೆಗಡೆ ಕೆರೆಕೊಪ್ಪ, ಗಜಾ‌ನನ ಭಟ್ಟ ತುಳಗೇರಿ, ನಿರಂಜನ ಜಾಗನಳ್ಳಿ ಜಿ.ಜಿ.ಹೆಗಡೆ ಕನೇನಳ್ಳಿ ಸ್ಪರ್ಧೆ ಯಶಸ್ವಿಗೆ ಸಹಕಾರ‌ ನೀಡಿದರು.

  ತಾಳಮದ್ದಲೆ ಸ್ಪರ್ಧೆಯ ಹಿಮ್ಮೇಳದಲ್ಲಿ ಸತೀಶ ದಂಟಕಲ್, ಶ್ರೀಪಾದ ಬಾಳೆಗದ್ದೆ, ಗಜಾನನ ತುಳಗೇರಿ, ಸುಬ್ರಾಯ ಭಟ್ಟ ಗಾಣಗದ್ದೆ, ಶ್ರೀಪತಿ ಹೆಗಡೆ‌ ಕಂಚಿಮನೆ  ಪಾಲ್ಗೊಂಡರು.

  ಯಕ್ಷೋತ್ಸವದ ಸಮಾರೋಪದಲ್ಲಿ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪ್ರಶಸ್ತಿ ಪತ್ರ ವಿತರಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top