• Slide
    Slide
    Slide
    previous arrow
    next arrow
  • ನಾಡು ಕೇಡು ಬಗೆದರೂ, ಕಾಡು ಕೇಡು ಬಗೆಯದು: ತಿಮ್ಮಯ್ಯ ಜಿ.

    300x250 AD

    ಸಿದ್ದಾಪುರ: ನಾಡು ಅಥವಾ ಊರು ನಮಗೆ ಹಲವು ಸಂದರ್ಭದಲ್ಲಿ ಕೇಡು ಬಗೆಯಬಹುದು. ಊರಿನಲ್ಲಿ ಕೇಡನ್ನು ಬಯಸುವ ಜನರಿರುವುದು ಸಹಜ. ಆದರೆ ಕಾಡು ನಮಗೆ ಬೇಕಾದಂತಹ ಪ್ರಾಣವಾಯು ಮತ್ತು ನಾವು ಬಿಟ್ಟ ನಿಶ್ವಾಸದ ವಾಯುವನ್ನು ಹೀರಿಕೊಂಡು ಮಾನವನಿಗೆ ಉಪಯುಕ್ತವಾಗಬಲ್ಲ ಅನೇಕ ಸಂಪತ್ತುಗಳನ್ನು ನೀಡುತ್ತದೆ. ಹಾಗಾಗಿ ಕಾಡು ನಮಗೆಂದೂ ಕೇಡು ಬಗೆಯದು. ನಾಡು ನಮಗೆ ಕೇಡು ಬಗೆಯಲು ಸಾಧ್ಯ ಎಂದು ಇಲ್ಲಿನ ನ್ಯಾಯಾಧೀಶ ತಿಮ್ಮಯ್ಯ ಜಿ. ಹೇಳಿದರು.
    ಅವರು ಸ್ಥಳೀಯ ಲಯನ್ಸ್ ಕ್ಲಬ್ ಹಾಗೂ ಹಲಗೇರಿ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವಾರದಲ್ಲಿ ವನಮಹೋತ್ಸವದ ನಿಮಿತ್ತ ಗಿಡಗಳನ್ನು ನೆಟ್ಟು ನಂತರ ನಡೆದ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರಕೃತಿ ನಾಶದ ಕಡೆ ಮಾನವ ಸಮುದಾಯ ಬಲು ಎಚ್ಚರಿಕೆಯಿಂದ ಗಿಡ-ಮರ-ಬಳ್ಳಿ ಹಾಗೂ ಜಲ ಸಂಪತ್ತನ್ನು, ಭೂಸಂಪತ್ತನ್ನು ಆರೋಗ್ಯಕರವಾಗಿ ರಕ್ಷಿಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯ. ಶಾಲಾ- ಕಾಲೇಜುಗಳಲ್ಲಿ ತಮ್ಮ ಪಠ್ಯದ ಜೊತೆ ಪ್ರಾಕೃತಿಕ ಸಂಪನ್ಮೂಲಗಳ ಅರಿವನ್ನು ಮೂಡಿಸುವ ಕೆಲಸ ಅಷ್ಟೇ ಮಹತ್ವದ್ದು. ಪ್ರತಿಯೊಂದು ವಿದ್ಯಾರ್ಥಿಗಳು ಕನಿಷ್ಠ ಎರಡೆರಡು ಗಿಡಗಳನ್ನು ನೆಟ್ಟು ಪೋಷಿಸುವಂತೆ ಕಿವಿಮಾತು ಹೇಳಿದರು.
    ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಹಾಗೂ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ರವಿ ಹೆಗಡೆ ಹೂವಿನ್ಮನೆ ಮಾತನಾಡಿ, ಗಿಡ-ಮರಗಳನ್ನು ಪೋಷಿಸಿ ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಲಯನ್ಸ್ ಸಂಸ್ಥೆ ಜಗತ್ತಿನಾದ್ಯಂತ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಉಪಪ್ರಾಚಾರ್ಯ ಅರವಿಂದ ಪಾಟೀಲ ಅವರು ಮಾತನಾಡಿ ಸಿದ್ದಾಪುರ ತಾಲೂಕಿನಲ್ಲಿ ಸಸ್ಯ ಪ್ರಭೇದಗಳು ಸಾಕಷ್ಟಿದ್ದು ಕತ್ತಲೆ ಕಾನ್ಸಿಸ್ ಎಂಬ ಒಂದು ಸಸ್ಯ ಪ್ರಭೇದ ಕತ್ತಲೆಕಾನು ಎಂಬ ಸ್ಥಳದಲ್ಲಿದ್ದು ಅದೊಂದು ವಿಶ್ವದಾಖಲೆ. ಅಲ್ಲದೇ ಸಿಂಗಳೀಕ ಎಂಬ ಜೀವಪ್ರಭೇದ ಇಲ್ಲಿದ್ದು, ಅವುಗಳ ರಕ್ಷಣೆ ಅಗತ್ಯ ಎಂದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಎಂ.ಪಾಟೀಲ ಅಧ್ಯಕ್ಷತೆ ವಹಿಸಿ, ವನಮಹೋತ್ಸವದ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸ ಅತ್ಯಂತ ಮಹತ್ವದ್ದು ಎಂದು ಹೇಳಿದರು.
    ಪ್ರೊ.ವಿಜಯಕುಮಾರ ಸ್ವಾಗತಿಸಿ ನಿರೂಪಿಸಿದರು. ಜಿ. ಜಿ. ಹೆಗಡೆ ಬಾಳಗೋಡ ವಂದಿಸಿದರು. ವೇದಿಕೆಯಲ್ಲಿ ಕಿರಿಯ ಪ್ರಾಧ್ಯಾಪಕ ಲೋಕೇಶ ನಾಯ್ಕ ಹೊಸೂರು ಹಾಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕುಮಾರ ಗೌಡರ್, ಕೋಶಾಧ್ಯಕ್ಷ ಆನಂದ ಶೇಟ್, ಕಾರ್ಯಕ್ರಮ ಸಂಯೋಜಕ ಸತೀಶ ಗೌಡರ್ ಹೆಗ್ಗೋಡ್ಮನೆ ಅವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರುಗಳಾದ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ, ಆರ್.ಎಂ. ಪಾಟೀಲ, ರಾಘವೇಂದ್ರ ಭಟ್ಟ ಕಲ್ಲಾಳ, ಪ್ರಶಾಂತ ಶೇಟ್ ಹಾಳದಕಟ್ಟಾ, ಸಂತೋಷಕುಮಾರ ಗೌಡರ್ ದೊಡ್ಡಗದ್ದೆ ಮುಂತಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top