ಸಿದ್ದಾಪುರ: ಆಳ್ವಾ ಫೌಂಡೇಶನ್ ಮತ್ತು ನಿಲೇಕಣಿ ಕುಟುಂಬದ ಸಹಕಾರದಿಂದ ಹಲಗೇರಿ ಗ್ರಾಮ ಪಂಚಾಯತದ ಮಾವಿನಗುಂಡಿಯಲ್ಲಿ ನಿರ್ಮಿಸಿಲಾಗಿದ್ದ ಬಸ್ ನಿಲ್ದಾಣವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಸಂತ ನಾಯ್ಕ ಮನ್ಮನೆ, ಜಿ.ಪಂ ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ, ತಾ.ಪಂ ಮಾಜಿ ಸದಸ್ಯ ನಾಸೀರ್ ಖಾನ್, ಡಿ.ಸಿ.ಸಿ ಕಾರ್ಯದರ್ಶಿ ಸಾವೇರ್ ಡಿ’ಸೀಲ್ವಾ, ಪ್ರಮುಖರಾದ ಬಾಲಕೃಷ್ಣ ನಾಯ್ಕ, ಜಿ.ಟಿ.ನಾಯ್ಕ ಗೋಳಗೋಡ,ಚಂದ್ರಕಾಂತ್ ನಾಯ್ಕ ಕಲ್ಲೂರು, ಪ್ರಶಾಂತ ನಾಯ್ಕ ಹೊಸೂರು, ಅಬ್ದುಲಾ ಸಾಬ್ ಹೇರೂರು, ಅರುಣ ನಾಯ್ಕ ಬಣಕಾರ ಮೊದಲಾದವರು ಉಪಸ್ಥಿತರಿದ್ದರು.