Slide
Slide
Slide
previous arrow
next arrow

ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ:ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮ ಆಯೋಜನೆ

300x250 AD

ಸಿದ್ದಾಪುರ: ಪಟ್ಟಣದ ಎಂ.ಜಿ.ಸಿ ಕಲಾ, ವಾಣಿಜ್ಯ ಹಾಗೂ ಗಣೇಶ ಹೆಗಡೆ ದೊಡ್ಮನೆ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅ.29ರ ಬೆಳಿಗ್ಗೆ 10.30ಕ್ಕೆ ರಾಮಕೃಷ್ಣ ಹೆಗಡೆ ಚಿರಂತನ (ರಿ) ಹಾಗೂ ಮಹಾವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗ ಇವರು ಸಂಯುಕ್ತವಾಗಿ ದಿ.ರಾಮಕೃಷ್ಣ ಹೆಗಡೆಯವರ 97ನೇ ಜನ್ಮ ದಿನೋತ್ಸವದ ನಿಮಿತ್ತ ‘ಹೆಗಡೆಯವರ ದೃಷ್ಟಿಕೋನದಲ್ಲಿ ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರ ರಾಜ್ಯಗಳ ಸಂಬಂಧಗಳು, ವರ್ತಮಾನ ಮತ್ತು ಭವಿತವ್ಯದಲ್ಲಿ ಇದರ ಪ್ರಸ್ತುತತೆ’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ರಾಮಕೃಷ್ಣ ಹೆಗಡೆ ಚಿರಂತನ (ರಿ) ಅಧ್ಯಕ್ಷ ಡಾ.ಶಶಿಭೂಷಣ ವಿ.ಹೆಗಡೆ ಹೇಳೀದರು.
ಪತ್ರಿಕಾಗೋಷ್ಠಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆಯವರು ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸಿದ ಅಗ್ರಗಣ್ಯರು. ಕೇಂದ್ರ ರಾಜ್ಯಗಳ ಸಂಬಂಧಗಳ ಮಾದರಿಯು ಯಾವ ರೀತಿಯಲ್ಲಿ ಇರಬೇಕೆಂದು ತಿಳಿಸುತ್ತಾ ಅವರದೇ ಆದ ಸಹಕಾರ ಸಂಯುಕ್ತ ಪದ್ಧತಿ ಪರಿಲಕ್ಪನೆಯನ್ನು ಪರಿಚಯಿಸಿದವರು. ಸಂವಿಧಾನಾತ್ಮಕವಾಗಿಯೇ ಪ್ರಸ್ತಾಪಿಸಲ್ಪಟ್ಟ ಈ ವಿಷಯಗಳು ಕಾಲಾನಂತರದಲ್ಲಿ ಸರ್ಕಾರಗಳು ಹೇಗೆ ಈ ವಿಷಯಗಳಲ್ಲಿ ಕವಲು ದಾರಿಯನ್ನು ಸೃಷ್ಟಿಸುತ್ತಿವೆ, ಬಲಾಢ್ಯ ಕೇಂದ್ರದ ನೈಜ ಅರ್ಥೈಸುವಿಕೆ ಹೇಗೆ ಮತ್ತು ಒಕ್ಕೂಟ ಪದ್ಧತಿಯ ವರ್ತಮಾನದ ವಿವಿಧ ತಲ್ಲಣಗಳು, ಸಂಬಂಧಗಳಲ್ಲಿ ರಾಜಕೀಯ ಸ್ಥಿತ್ಯಂತರಗಳ ನಡುವೆ ಭವಿತವ್ಯದಲ್ಲಿ ಹೆಗಡೆಯವರ ತತ್ವಗಳ ಪ್ರತಿಪಾದನೆಯ ಮೂಲಕ ಒಕ್ಕೂಟ ಪದ್ಧತಿಯನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎಂದು ಚರ್ಚಿಸುವುದು ಈ ಕಾಲಮಾನದ ಆಡಳಿತಾತ್ಮಕ ತುರ್ತಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಥ ನಾಯಕನ ದೃಷ್ಟಿ ಆಲೋಚನೆಗಳನ್ನು ನಿರಂತರವಾಗಿ ಸಮಾಜಕ್ಕೆ ಪಸರಿಸುತ್ತಿರುವ ಕಾರ್ಯವನ್ನು ರಾಮಕೃಷ್ಣ ಹೆಗಡೆ ಚಿರಂತನ (ರಿ) ನಡೆಸಿಕೊಂಡು ಬಂದಿದೆ.
ಮುಖ್ಯ ಅತಿಥಿಗಳಾಗಿ ದಾಂಡೇಲಿ ಬಂಗೂರುನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು, ಲೇಖಕರೂ ಹಾಗೂ ಚಿಂತಕರು ಆದ ಡಾ.ಆರ್.ಜಿ.ಹೆಗಡೆಯವರು ಆಗಮಿಸಲಿದ್ದು, ರಾಮಕೃಷ್ಣ ಹೆಗಡೆ ಚಿರಂತನದ ವಿಶ್ವಸ್ತರಾದ ಮತ್ತು ವಕೀಲ ಆರ್.ಜಿ.ನಾಯ್ಕ ಕುಮಟಾ ಹಾಗೂ ಬಸವರಾಜ ಓಶಿಮಠ ಹಳಿಯಾಳ ಇವರು ಉಪಸ್ಥಿತರಿರುವರು. ಇದೊಂದು ಸಮಕಾಲಿನ ಮಹತ್ವದ ಚಿಂತನ ಮಂಥನ ಕಾರ್ಯಕ್ರಮವಾಗಿದ್ದು, ಅಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸಾಮಾಜಿಕ ರಾಜಕೀಯ ನೀತಿ ರೂಪಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಷಯಕ್ಕೆ ಧ್ವನಿಯಾಗಿ ಯಶಸ್ವಿಗೊಳಿಸಬೇಕೆಂದು ಶಶಿಭೂಷಣ ಹೆಗಡೆ ದೊಡ್ಮನೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯದರ್ಶಿ ಕೆ.ಎ.ಹೆಗಡೆ, ಪ್ರೋ.ಸುರೇಶ ಗುತ್ತಿಕರ, ಬಸಲಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top