• Slide
    Slide
    Slide
    previous arrow
    next arrow
  • ಸರ್ಕಾರಿ ಶಾಲೆಗಳಿಗೂ ಎಲ್ಲ ಸೌಲಭ್ಯ ದೊರೆಯುವಂತಾಗಬೇಕು: ನಿವೇದಿತ್ ಆಳ್ವಾ

    300x250 AD

    ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಮಾದರಿ ಹಿರಿಯ ಶಾಲೆಗೆ ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ಕೊಡುಗೆಯಾಗಿ ನೀಡಿದ ಆಟದ ಪರಿಕರಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆಳ್ವಾ ಫೌಂಡೇಶನ್ ಟ್ರಸ್ಟಿ ನಿವೇದಿತ್ ಆಳ್ವಾ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಆಟೋಪಕರಣಗಳನ್ನು ಒದಗಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಸದುದ್ಧೇಶವನ್ನು ಹೊಂದಿದ್ದೇವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೂ ಪಟ್ಟಣದ ಖಾಸಗಿ ಶಾಲೆಯ ಸೌಲಭ್ಯ ಸಿಗುವಂತಾಗಬೇಕು ಎಂದು ಹೇಳಿದರು.
    ನಮ್ಮ ಫೌಂಡೇಶನ್ ಮತ್ತು ನಂದನ ನಿಲೇಕಣಿ ಇವರ ಕುಟುಂಬದ ವತಿಯಿಂದ ಈಗಾಗಲೆ ಹಲವಾರು ಶಾಲೆಗಳಿಗೆ ಹೈಟೆಕ್ ಆಟೋಪಕರಣಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವಾರು ಶಾಲೆಗಳಿಗೆ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಕೋಲಶಿರ್ಸಿ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ನೀಡುವ ಭರವಸೆ ನೀಡಿದರು.
    ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿ, ಆಳ್ವಾ ಫೌಂಡೇಶನ್ ಮೂಲಕ ನಿವೇದಿತ್ ಆಳ್ವಾರವರು ಹಲವು ವ್ಯವಸ್ಥೆಗಳನ್ನು ಸಮಾಜಕ್ಕೆ ಕಲ್ಪಿಸಿದ್ದಾರೆ. ಅವರು ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜನತೆಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟು ನೆರವಾಗಿದ್ದಾರೆ ಎಂದರು.
    ತಾಲೂಕ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಮಾತನಾಡಿ, ನಿವೇದಿತ್ ಆಳ್ವಾರವರು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಗುಪ್ಪದಲ್ಲಿರುವ ಡಿಪ್ಲೊಮೊ ಕಾಲೇಜಿಗೆ ನೂರಕ್ಕೂ ಹೆಚ್ಚು ಕಂಪ್ಯೂಟರ್ ನೀಡಿದ್ದಾರೆ. ಹಲವು ಸಮುದಾಯ ಭವನಗಳಿಗೆ ಅನುದಾನವನ್ನು ಒದಗಿಸಿದ್ದಾರೆ. ಮಾವಿನಗುಂಡಿಯಲ್ಲಿ ಅಗತ್ಯವಿರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿಸಿದ್ದಾರೆ ಎಂದರು.
    ಸನ್ಮಾನ: ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ಶಾಲೆಗೆ ಹೈಟೆಕ್ ಆಟಿಕೆ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ನಿವೇದಿತ್ ಆಳ್ವಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
    ನಾಗರಾಜ ನಾಯ್ಕ ಮಾಳ್ಕೋಡ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಸುಮನಾ ಶೇಟ್ ವಂದಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಸತೀಶ ಪಿ.ನಾಯ್ಕ, ತಾಲೂಕ ಪಂಚಾಯತ ಮಾಜಿ ಸದಸ್ಯ ನಾಸೀರ್ ವಲ್ಲಿ ಖಾನ್, ಗ್ರಾಮ ಪಂಚಾಯತ ಸದಸ್ಯ ತಿಲಕಕುಮಾರ ನಾಯ್ಕ, ಮಾಜಿ ಸದಸ್ಯ ಬಾಲಕೃಷ್ಣ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ ನಾಯ್ಕ, ಉಪಾಧ್ಯಕ್ಷೆ ದಿವ್ಯ ನಾಯ್ಕ, ಸದಸ್ಯರಾದ ಅಣ್ಣಪ್ಪ ನಾಯ್ಕ, ಕೃಷ್ಣ ನಾಯ್ಕ ಸುಂಠಿ, ಸರೋಜಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top