ಹೊನ್ನಾವರ: ತಾಯಿಗೆ ದೇವರ ಸ್ಥಾನ ನೀಡಿದ್ದಾರೆ. ತಾಯಿಯ ಮಮತೆಗೆ ಯಾವುದೂ ಸಾಟಿಯಿಲ್ಲ ಎಂದು ಡಾ.ವೈಶಾಲಿ ನಾಯ್ಕ ಹೇಳಿದರು.
ಪಟ್ಟಣದ ಹೊನ್ನಾವರ ನಂ.1 ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ತಾಯಂದಿರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೆಣ್ಣಿಗೆ ತಾಯಿ ಆಗುವ ಅವಕಾಶವನ್ನು ದೇವರು ಕೊಟ್ಟಿದ್ದಾನೆ. ಮಕ್ಕಳಲ್ಲಿ ಒಳ್ಳೆಯಗುಣ ಕಲಿಸಿ ಉತ್ತಮ ನಾಗರಿಕರಾಗಿ ಮಾಡುತ್ತಾಳೆ ಎಂದರು.
ಮುಖ್ಯಾಧ್ಯಾಪಕಿ ಉಷಾ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಮನುಷ್ಯನ ಬದುಕಿನಲ್ಲಿ ತಾಯಿಯ ಸ್ಥಾನ ದೊಡ್ಡದು. ತಾಯಿಯ ಮಹತ್ವದ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕಿ ಸೀಮಾ ನಾಯಕ, ದೀಪಾ ನರೇಂದ್ರ ಕಾಮತ, ಶಿಕ್ಷಕರಾದ ಕಮಲಾಕರ ನಾಯ್ಕ, ಶುಭಾ ನಾಯ್ಕ, ಪ್ರತಿಭಾ ನಾಯ್ಕ ಹಾಗೂ ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು.