Slide
Slide
Slide
previous arrow
next arrow

ಗೋಡೆಕೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಲೋಕಾರ್ಪಣೆ

300x250 AD

ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾ.ಪಂ. ವ್ಯಾಪ್ತಿಯ ಗೋಡೆಕೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಜಾಹ್ನವಿ ಭಟ್ ಉದ್ಘಾಟಿಸಿದರು.
ಗೋಡೆಕೇರಿಯಲ್ಲಿ ಹಾಲಕ್ಕಿ ಸಮಾಜದವರೇ ಹೆಚ್ಚಿದ್ದು, ಹಲವು ವರ್ಷಗಳಿಂದ ಚಿಕ್ಕ ಗುಡಿಸಲಿನಲ್ಲಿ ಅಂಗನವಾಡಿ ನಡೆಸಲಾಗುತ್ತಿತ್ತು. ಊರಿನ ವಿ.ಡಿ.ಹೆಗಡೆಯವರ ಸ್ಥಳ ದಾನದ ಸಹಕಾರದೊಂದಿಗೆ ನೂತನ ಅಂಗನವಾಡಿ ನಿರ್ಮಾಣಗೊಂಡಿದ್ದು, ಗುರುವಾರ ಲೋಕಾರ್ಪಣೆಗೊಂಡಿತು.
ಗ್ರಾ.ಪಂ. ಸದಸ್ಯ ಗಜಾನನ ಮಡಿವಾಳ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಸದಸ್ಯೆ ಉರ್ಮಿಳಾ ಶೇಟ್, ಅಂಗನಾಡಿ ಕೇಂದ್ರದ ಶಿಕ್ಷಕಿಯರು, ಸ್ಥಳೀಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top