ಕುಮಟಾ: ಮಹಾಶಿವನ ಆತ್ಮಲಿಂಗವಿರುವ ಪಂಚಕ್ಷೇತ್ರಗಳಲ್ಲೊಂದಾದ ಇಲ್ಲಿನ ಶ್ರೀಕ್ಷೇತ್ರ ಧಾರೇಶ್ವರ ದೇವಾಲಯದಲ್ಲಿ ನೆಲೆಸಿರುವ ಶ್ರೀಧಾರನಾಥನಿಗೆ ರಜತ ನಾಗಾಭರಣ ಸಮರ್ಪಣೆ ಮಾಡಲಾಯಿತು.
ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ನೆಲೆಸಿರುವ ಶ್ರೀಧಾರಾನಾಥನಿಗೆ ಭಕ್ತರಾದ ರಮೇಶ ಶೇಟ್ ಹಾಗೂ ಕುಟುಂಬದವರು ಐದು ಕೆಜಿ ತೂಕದ ರಜತ ಪೀಠ ಸಹಿತವಾದ ರಜತ ನಾಗಾಭರಣವನ್ನು ಸಮರ್ಪಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಎಲ್ಲಾ ಅರ್ಚಕರ ಮಾರ್ಗದರ್ಶನದಲ್ಲಿ ದೇವರ ಮೂರ್ತಿಗಳಿಗೆ ಅಗ್ನ್ಯುತ್ತಾರಣ ಸೇರಿದಂತೆ ಕೆಲ ಧಾರ್ಮಿಕ ಕೈಕಂರ್ಯಗಳನ್ನು ನೆರವೇರಿಸಿದ ಬಳಿಕ ದೇವರಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿದರು. ರಜತ ನಾಗಾಭರಣ ಭೂಷಿತ ದೇವರ ಸುಂದರ ರೂಪವನ್ನು ನೋಡುವುದೆ ಕಣ್ಣಿಗೊಂದ ಹಬ್ಬದಂತಾಗಿತ್ತು. ವಿಶೇಷ ಸೇವೆ ಸಲ್ಲಿಸಿದ ಭಕ್ತರು ದೇವರಲ್ಲಿ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾಥಿಸಿದರು.
ಈ ಆಭರಣಗಳನ್ನು ಉಡುಪಿಯ ಭಾಸ್ಕರ ಶೇಟರವರ ತಂಡ ಅತ್ಯಂತ ಮನೋಹರವಾಗಿ ಸಿದ್ಧಪಡಿಸಿದ್ದು, ಎಲ್ಲ ಭಕ್ತರನ್ನು ಆಕರ್ಷಿಸುವಂತಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ದಾನಿ ರಮೇಶ ಶೇಟ್ ಮತ್ತು ಅವರ ಕುಟುಂಬದವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.