ಅಂಕೋಲಾ: ಬಿಜೆಪಿ ಮೀನುಗಾರ ಪ್ರಕೋಷ್ಟದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಗುರುವಾರ ಬಿಜೆಪಿಯ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಜರುಗಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಅಂಕೋಲಾದ ಉದ್ಯಮಿ ಹಾಗೂ ಮೀನುಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ ಹೂವಾ ಖಂಡೇಕರ ವಹಿಸಿ ಮಾತನಾಡಿ, ರಾಜ್ಯದಲ್ಲಿ ಮೀನುಗಾರರ ಪ್ರಕೋಷ್ಟ ಮಹತ್ವದ ಪಾತ್ರ ವಹಿಸಬೇಕಾಗಿದೆ. ಆದ್ದರಿಂದ ರಾಜ್ಯ ಕಮಿಟಿ, ಜಿಲ್ಲಾ ಕಮಿಟಿ ಹಾಗೂ ಮಂಡಲ ಸಮಿತಿಯವರು ಪಕ್ಷ ಸಂಘಟನೆ ಮಾಡುವುದರ ಮೂಲಕ ಪಕ್ಷವನ್ನು ಇನ್ನೊಮ್ಮೆ ಅಧಿಕಾರಕ್ಕೆ ತರಬೇಕು. ಆದ್ದರಿಂದ ಎಲ್ಲರೂ ಇಂದಿನಿಂದಲೇ ಪಕ್ಷ ಸಂಘಟನೆಗೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆನೀಡಿದರು.
ಸಹ ಸಂಚಾಲಕ ನಾಗಪ್ಪಾ ಅಂಬಿ, ರಾಜ್ಯ ಸಮಿತಿಯವರಿಗೆಲ್ಲಾ ಜವಾಬ್ದಾರಿ ಹಂಚಿದರು. ಶಿವಮೊಗ್ಗಾ ಮೇಯರ್ ಸುನಿತಾ ಅಣ್ಣಪ್ಪ ಅವರು ಪಕ್ಷದ ಸಂಘಟನೆ ಶಿಸ್ತಿನ ಕುರಿತು ಮತನಾಡಿದರು. ಸಭೆಯಲ್ಲಿ ಸೊರಬ ಪುರಸಭೆಯ ಅಧ್ಯಕ್ಷ ವೀರೇಶ ಹಾಗೂ ರಾಜ್ಯ ಸಮಿತಿಯ ಸದಸ್ಯರು, ಜಿಲ್ಲಾ ಸಂಚಾಲಕರು, ಸಹಸಂಚಾಲಕರು ಪಾಲ್ಗೊಂಡಿದ್ದರು.
ಮೀನುಗಾರ ಪ್ರಕೋಷ್ಟದ ರಾಜ್ಯ ಕಾರ್ಯಕಾರಿಣಿ ಸಭೆ
