• Slide
  Slide
  Slide
  previous arrow
  next arrow
 • ಸೆ.2 ರಿಂದ ದಸರಾ ಕ್ರೀಡಾಕೂಟ

  300x250 AD

  ಶಿರಸಿ: 2022-23ನೇ ಸಾಲಿನ ದಸರಾ ಕ್ರೀಡಾಕೂಟವು ತಾಲೂಕಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯಲಿದ್ದು, ಶಿರಸಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟಗಳನ್ನು ದಿನಾಂಕ: 2, 3, ಸೆಪ್ಟೆಂಬರ್ 2022ರಂದು ನಡೆಸಲಾಗುವುದು, ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮಹಿಳೆಯರನ್ನು ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು.

  ಸ್ಥಳ: ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಸಿರಸಿ,
  ನೋಂದಣಿ: ಕೊನೆಯ ದಿನಾಂಕ 01.09.2022 (ನೋಂದಣಿ ಕಡ್ಡಾಯ)
  ಸಂಪರ್ಕಿಸುವ ವಿಳಾಸ :- ಕಿರಣಕುಮಾರ್, ಕ್ರೀಡಾಧಿಕಾರಿ, ತಾಲೂಕಾ ಪಂಚಾಯತ್ ಶಿರಸಿ ಮೊಬೈಲ್ ಸಂಖ್ಯೆ : 9449801404
  ಅಣ್ಣಪ್ಪ ನಾಯ್ಕ, ತರಬೇತುದಾರರು ಶಿರಸಿ 9663348911

  ಪುರುಷರಿಗಾಗಿ ಗುಂಪು ಸ್ಪರ್ಧೆ:
  ಕಬ್ಬಡಿ, ಖೋ-ಖೋ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಫುಟ್ ಬಾಲ್, ಥ್ರೋ ಬಾಲ್
  ಪುರುಷರಿಗಾಗಿ ಅಥ್ಲೆಟಿಕ್ಸ್ ಸ್ಪರ್ಧೆಗಳು
  100ಮೀ, 200ಮೀ, 400ಮೀ, 800ಮೀ,1500ಮೀ, 5000 ಮೀಟರ್ ಓಟ,ಹಾಗೂ 4X100 ರಿಲೇ , 4X400 ಮೀ ರಿಲೇ, ಉದ್ದ ಜಿಗಿತ,ಎತ್ತರ ಜಿಗಿತ,ಚಕ್ರ ಎಸೆತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್

  ಮಹಿಳೆಯರಿಗಾಗಿ ಗುಂಪು ಸ್ಪರ್ಧೆ:
  ಕಬ್ಬಡಿ, ಖೋ-ಖೋ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್,

  ಮಹಿಳೆಯರ ಅಥ್ಲೆಟಿಕ್ ಸ್ಪರ್ಧೆಗಳು:

  300x250 AD

  100ಮೀ, .200ಮೀ,. 400ಮೀ, 800ಮೀ,1500ಮೀ, ೩000ಮೀ ಓಟ, 4X100 ರಿಲೇ, 4X400 ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ ಗುಂಡುಎಸೆತ ಟ್ರಿಪಲ್ ಜಂಪ್,ಜಾವ್ಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್

  ಸೂಚನೆಗಳು:

  • ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ಆಯಾ ತಾಲೂಕಿನವರೇ ಆಗಿರಬೇಕು.
  • ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇರುವದಿಲ್ಲ.
  • ಕಬ್ಬಡಿ ಮತ್ತು ವಾಲಿಬಾಲ್ ಆಟಗಳನ್ನು ಅಂದು ಬೆಳಿಗ್ಗೆ 11.00 ಗಂಟೆಯಿಂದ ಪಾರಂಭಿಸಲಾಗುತ್ತದೆ.
  • ಒಬ್ಬರಿಗೆ ಎರಡು ವೈಯಕ್ತಿಕ ಮತ್ತು ಒಂದು ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.
  • ಭಾಗವಹಿಸುವವರು ಕ್ರೀಡಾ ದಿನದಂದು ಬೆಳಿಗ್ಗೆ 10.00 ಗಂಟೆ ಒಳಗಾಗಿ ನೊಂದಾಯಿಸಿಕೊಳ್ಳಬೇಕು.
  • ಭಾಗವಹಿಸುವವರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ.
  • ನಿಯಮಾವಳಿಯಲ್ಲಿ ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.

  ವೈಯಕ್ತಿಕ ಆಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡದವರು ಬ್ಯಾಂಕ್ ಖಾತೆ ಸಂಖ್ಯೆ, ಆಧಾರ ಕಾರ್ಡ ಭಾವಚಿತ್ರ ಸ್ಥಳದಲ್ಲಿ ನೀಡುವುದು.

  Share This
  300x250 AD
  300x250 AD
  300x250 AD
  Leaderboard Ad
  Back to top