ಶಿರಸಿ: ತಾಲೂಕಿನ ಕಲ್ಲಿಯ ಸರಕಾರಿ ಶಾಲೆಯಲ್ಲಿ ಇತ್ತೀಚಿಗೆ ಮಕ್ಕಳಿಗಾಗಿ ಹಬ್ಬಗಳ ಚಿತ್ರ ಬಿಡಿಸುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಆ.24ರಂದು ಬಹುಮಾನಗಳನ್ನು ವಿತರಿಸಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಯಿತು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ರಮಾ ಪಟವರ್ಧನರು ಮಕ್ಕಳು ಬಿಡಿಸಿದ ಗಣೇಶ ಹಬ್ಬದ ಚಿತ್ರಗಳನ್ನು ನೋಡಿ ಗಣೇಶನ ಕಥೆಗಳನ್ನು ಹೇಳಿ ಅವುಗಳಿಂದ ನಾವು ಕಲಿಯುವಂಥ ನೀತಿ ಪಾಠಗಳನ್ನು ತಿಳಿಸಿಕೊಟ್ಟರು.
ಲಯನ್ ಜ್ಯೋತಿ ಅಶ್ವತ್ಥ ಹೆಗಡೆ ಇಂಗ್ಲಿಷ್ ವರ್ಣಮಾಲೆಯನ್ನು ಬಳಸಿ ಚಿತ್ರ ಬಿಡಿಸುವುದನ್ನು ಹೇಳಿಕೊಟ್ಟು, ಅನೇಕ ಕಸದಿಂದ ರಸ ಮಾಡುವ ಬಗ್ಗೆ ತಿಳಿಸಿಕೊಟ್ಟರು. ಲಯನ್ ಶರಾವತಿ ಭಟ್ಟರು ಸುಲಭವಾಗಿ ಲೆಕ್ಕ ಬಿಡಿಸುವದನ್ನು ಕಲಿಸಿದರು. ಲಯನ್ ಸುಮಂಗಲಾ ಹೆಗಡೆಯವರು ರಾಷ್ಟ್ರಧ್ವಜದ ಬಗ್ಗೆ ಹಾಡನ್ನು ಹೇಳಿಕೊಟ್ಟು ಮಕ್ಕಳಿಗೆ ಆಟವನ್ನು ಆಡಿಸಿದರು. ಶಾಲೆಯ ಮುಖ್ಯೋಧ್ಯಾಪಕರಾದ ಶ್ರೀಮತಿ ಸುಭಾಷಿಣಿ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ನಡೆಸುವಲ್ಲಿ ಒಳ್ಳೆಯ ಸಹಕಾರ ನೀಡಿದರು. ಮಕ್ಕಳು ಲವಲವಿಕೆಯಿಂದ ಭಾಗವಹಿಸಿ ಸಂತೋಷಪಟ್ಟು ನಕ್ಕು ನಲಿದಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.