• Slide
    Slide
    Slide
    previous arrow
    next arrow
  • ಗಣೇಶೋತ್ಸವ ಆಚರಣೆಯ ಕುರಿತು ಶಾಂತಿಪಾಲನಾ ಸಭೆ

    300x250 AD

    ದಾಂಡೇಲಿ : ನಗರದ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಬಂಗೂರನಗರ ಡಿಲಕ್ಸ್ ಸಭಾಭವನದಲ್ಲಿ ಗಣೇಶೋತ್ಸವ ಆಚರಣೆಯ ಬಗ್ಗೆ ಶಾಂತಿಪಾಲನಾ ಸಭೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

    ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಿವೈಎಸ್ಪಿ ಗಣೇಶ್.ಕೆ.ಎಲ್ ಅವರು ಸರ್ವಧರ್ಮ ಸಮನ್ವಯತೆಯ ನಗರವಾದ ದಾಂಡೇಲಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಕರೆ ನೀಡಿದ ಅವರು ಸಾರ್ವಜನಕ ಗಣೇಶೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಕಾಲಕಾಲಕ್ಕೆ ಸರಕಾರ ಹೊರಡಿಸುವ ಆದೇಶವನ್ನು ಚಾಚುತಪ್ಪದೇ ಪಾಲಿಸಬೇಕು. ಸಾರ್ವಜನಿಕ ಗಣೇಶ ಮಂಡಳಗಳು ತಮ್ಮ ಗಣೇಶ ಮಂಡಳದಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಂಡ ಶಾಂತಿಸುವ್ವಸ್ಥೆಗೆ ಧಕ್ಕಯಾಗದಂತೆ ಸಹಕರಿಸಬೇಕೆಂದು ಕರೆ ನೀಡಿ, ಅಗತ್ಯ ಬಿದ್ದ ಯಾವುದೇ ಸಂದರ್ಭದಲ್ಲಿ ಇಲಾಖೆಯನ್ನು ಸಂಪರ್ಕಿಸಬೇಕೆಂದು ಹೇಳಿದರು.

    ಸಿಪಿಐ ಬಿ.ಎಸ್.ಲೋಕಾಪುರ ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಸರಕಾರದ ನಿಗಧಿ ಪಡಿಸಿದ ಮಾರ್ಗಸೂಚಿಗಳನ್ನು ವಿವರಿಸಿ, ಅದನ್ನು ಪಾಲಿಸುವಂತೆ ಕರೆ ನೀಡಿದರು. ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಸಾರ್ವಜನಿಕ ಗಣೇಶೋತ್ಸವ ಕರ‍್ಯಕ್ರಮವನ್ನು ಶೃದ್ದಾಭಕ್ತಿಯ ಆಚರಣೆಯ ಜೊತೆಗೆ ಶಾಂತಿಯುತವಾಗಿ ಆಚರಿಸುವಂತೆ ಕರೆ ನೀಡಿದರು. ನಗರ ಸಭೆಯ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ಅವರು ಮಾತನಾಡಿ ಪ್ರತಿಯೊಂದು ಸಾರ್ವಜನಿಕ ಗಣೇಶ ಮಂಡಳಗಳು ತಮ್ಮ ತಮ್ಮ ಗಣೇಶ ಮಂಟಪದಲ್ಲಿ ಸಿಸಿ ಕ್ಯಾಮೇರಾವನ್ನು ಆಳವಡಿಸುವಂತೆ ಮನವಿ ಮಾಡಿದರು. ಹೆಸ್ಕಾಂ ಸಹಾಯಕ ಕರ‍್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ ಅವರು ಇಲಾಖೆಗೆ ಸಂಬಂಧಪಟ್ಟಂತೆ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತೆ ಹೇಳಿದರು.

    300x250 AD

    ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೌಲಾಲಿ ಮುಲ್ಲಾ, ತಹಶೀಲ್ದಾರ್ ಕಚೇರಿಯ ಶಿರೇಸ್ತೇದಾರ ರಾಘವೇಂದ್ರ ಪೂಜೇರಿ, ಪಿಎಸೈಗಳಾದ ಕಿರಣ್ ಪಾಟೀಲ್, ಯಲ್ಲಪ್ಪ.ಎಸ್, ಕೃಷ್ಣೆ ಗೌಡ ಮೊದಲಾದವರು ಉಪಸ್ಥಿತರಿದ್ದರು.

    ಸಾರ್ವಜನಿಕರ ಪರವಾಗಿ ನಗರ ಸಭಾ ಸದಸ್ಯ ಮೋಹನ ಹಲವಾಯಿ, ಪ್ರಮುಖರುಗಳಾದ ಎಸ್.ಎಸ್.ಕುರ್ಡೇಕರ, ಸಂದೇಶ್.ಎಸ್.ಜೈನ್, ವಾಸುದೇವ ಪ್ರಭು, ವಿಷ್ಣು ನಾಯರ್, ಫಿರೋಜ್ ಪಿರ್ಜಾದೆ, ರವಿ ಸುತಾರ್, ರಫೀಕ್ ಹುದ್ದಾರ, ಪರಮೇಶಿ ಕಲಾಲ್.ಎಸ್.ಎಸ್.ಪೂಜಾರ್ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top