Slide
Slide
Slide
previous arrow
next arrow

ಹಾನಿಕಾರಕ ವಸ್ತು ಬಳಕೆ:ಫಾಸ್ಟ್ ಫುಡ್ ಅಂಗಡಿ ಮೇಲೆ ದಾಳಿ

300x250 AD

ಕಾರವಾರ: ಫಾಸ್ಟ್ ಫುಡ್ ಕೇಂದ್ರಗಳಲ್ಲಿ ರುಚಿ ಬರಲು ಆಹಾರ ವಸ್ತುಗಳಿಗೆ ಹಾನಿಕಾರಕ ವಸ್ತುಗಳನ್ನ ಬಳಸಿ ಸಾರ್ವಜನಿಕರಿಗೆ ನೀಡುತ್ತಾರೆ ಎನ್ನುವ ಆರೋಪದ ಅಡಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳವಾರ ನಗರದ ಠಾಗೋರ್ ಕಡಲ ತೀರದ ಫುಡ್ ಕೋರ್ಟ್’ನಲ್ಲಿ ದಾಳಿ ನಡೆಸಿದರು.

ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಫಾಸ್ಟ್ ಫುಡ್ ಕೇಂದ್ರಗಳಲ್ಲಿನ ಆಹಾರ ವಸ್ತುಗಳನ್ನ ಸಂಗ್ರಹಿಸಿ ಹಾನಿಕಾರಕ ವಸ್ತುಗಳು ಬಳಕೆ ಮಾಡಲಾಗಿದೆಯೇ ಇಲ್ಲವೋ ಎಂದು ಲ್ಯಾಬ್‌ಗೆ ಮಾಹಿತಿ ಪಡೆಯಲು ಕಳುಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ರಾಜಶೇಖರ್ ಕಳೆದ ಹಲವು ದಿನಗಳಿಂದ ತಮ್ಮ ಕಚೇರಿಗೆ ರಸ್ತೆ ಬದಿಯ ವ್ಯಾಪಾರಿಗಳು ಸರಿಯಾಗಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಹಾನಿಕಾರಕ ವಸ್ತುಗಳ ಬಳಕೆ ಮಾಡಲಾಗುತ್ತಿದೆ ಎಂದು ದೂರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ದಾಳಿ ಮಾಡಿರುವುದಾಗಿ ಹೇಳಿದ್ದಾರೆ. ಫಾಸ್ಟ್ ಫುಡ್‌ಗಳನ್ನ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಏತಕ್ಕಾಗಿ ರುಚಿ ಹೆಚ್ಚಿರುತ್ತದೆ, ಎನ್ನುವುದು ತಿಳಿದಿಲ್ಲ. ಜನರಿಗೆ ಹಾನಿಕಾರಕ ವಸ್ತು ಬಳಕೆ ಮಾಡುವುದರಿಂದ ರುಚಿ ಹೆಚ್ಚಿರುತ್ತದೆ ಎಂದು ಭೀತಿ ಇದ್ದು, ಈ ಹಿನ್ನಲೆಯಲ್ಲಿ ಪಾನಿ, ಇನ್ನಿತರ ವಸ್ತುಗಳನ್ನ ಪಡೆದು ಲ್ಯಾಬಿಗೆ ಕಳಿಸಲಾಗಿದೆ.

300x250 AD

ಇದಲ್ಲದೇ ರದ್ದಿ ಪೇಪರ್‌ಗಳನ್ನ ಬಳಕೆ ಮಾಡಿ ಕರಿದಿರುವ ವಸ್ತುಗಳನ್ನ ಶೇಖರಣೆ ಮಾಡುತ್ತಿದ್ದಾರೆ. ಅಕ್ಷರಗಳಲ್ಲಿ ಇರುವ ಇಂಕ್ ಎಣ್ಣೆಯೊಂದಿಗೆ ವಸ್ತುಗಳ ಜೊತೆ ಸೇರಿ ಕ್ಯಾನ್ಸರ್ ನಂತಹ ಅಂಶ ಇರುವುದರಿಂದ ಸಾಕಷ್ಟು ಪರಿಣಾಮ ಬೀಳುತ್ತದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆ ದಾಳಿ ಮಾಡಲಾಗಿದೆ. ಎಲ್ಲಾ ಕಡೆ ದಾಳಿ ಮಾಡಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಸಹ ಮಾಡಲಾಗುತ್ತದೆ. ಯಾರು ನಿಯಮಗಳನ್ನ ಪಾಲಿಸುವುದಿಲ್ಲವೋ ಅಂತಹ ಅಂಗಡಿಕಾರರಿಗೆ ದಂಡ ಹಾಕಿ ಕಾನೂನಿನ ಪ್ರಕಾರ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಡಾ.ರಾಜಶೇಖರ್ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top