Slide
Slide
Slide
previous arrow
next arrow

ಮೆಚ್ಚುಗೆ ಗಳಿಸಿದ ಸ್ವರ ನಮನ ಸಂಗೀತ ಕಾರ್ಯಕ್ರಮ

300x250 AD

ಕಾರವಾರ: ಅಂಕೋಲಾ- ಕಾರವಾರ ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದಿಂದ ಗುರುಪೂರ್ಣಿಮೆಯ ನಿಮಿತ್ತ ಸ್ವರ ನಮನ ಸಂಗೀತ ಕಾರ್ಯಕ್ರಮ ನಗರದ ಹಿಂದೂ ಪ್ರೌಢಶಾಲೆಯಲ್ಲಿ ನಡೆಯಿತು.

ಕೆನರಾ ವೆಲ್ಫೇರ್ ಟ್ರಸ್ಟ್ ಚೇರ್ಮನ್ ಹಾಗೂ ಕಾರವಾರ ಎಜುಕೇಶನ್ ಸೊಸೈಟಿಯು ಅಧ್ಯಕ್ಷ ಎಸ್.ಪಿ.ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಗೀತದ ಛಂದಸ್ಸು ಹಾಗೂ ತಂತಿ ವಾದ್ಯಗಳ ಉಗಮದ ಬಗ್ಗೆ ವಿವರಿಸಿ ರಾಗಗಳ ಮೂಲಕ ಭಗವಂತನನ್ನು ಕಾಣಬಹುದು ಎಂದರು.
ಪತ್ರಕರ್ತ ಎಮ್.ಪಿ. ಕಾಮತ್, ಸರಿಸುಮಾರು ಮೂರು ದಶಕಗಳ ಹಿಂದೆ ಕಾರವಾರದಲ್ಲಿ ಶಾಸ್ತ್ರೀಯ ಸಂಗೀತ ನೆಲೆಗೊಳ್ಳುತ್ತಿದ್ದ ಕಾಲದ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳ ಗಾಯನವನ್ನು ಮುಕ್ತವಾಗಿ ಮೆಚ್ಚಿ ಹಾರೈಸಿದರು.

ಕಾರವಾರ ಎಜುಕೇಶನ್ ಸೊಸೈಟಿಯು ಆಡಳಿತಾಧಿಕಾರಿ ಜಿ.ಪಿ.ಕಾಮತ್, ವಿದ್ಯಾರ್ಥಿಗಳ ಹಾಡುಗಾರಿಕೆಯನ್ನು ಮೆಚ್ಚುಗೆ ಸೂಚಿಸಿದರು. ಮಕ್ಕಳಿಗೆ ತರಬೇತಿ ನೀಡಿದ ಸಂಗೀತ ಗುರುಗಳಾದ ತಬಲಾ ಶಿಕ್ಷಕ ಗಣಪತಿ ಹೆಗಡೆ ಹಾಗೂ ಸಂಗೀತ ಶಿಕ್ಷಕ ಮಾರುತಿ ನಾಯ್ಕ ಇವರುಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

300x250 AD

ಕಲಾನಿಕೇತನದ ವಿದ್ಯಾರ್ಥಿಗಳು ತಮ್ಮ ಅದ್ಭುತ ಗಾಯನದ ಮೂಲಕ ಸಭಿಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು. ಸುಮತಿ ದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ್ ಶೇಟ್ ಅತಿಥಿಗಳ ಪರಿಚಯಸಿದರು. ಹಿಂದೂ ಪ್ರೌಢಶಾಲೆಯ ಶಿಕ್ಷಕಿ ವೇದಾವತಿ ನಾಯ್ಕ ವಂದಿಸಿದರು. ಪ್ರೇಮಾ ಟಿ.ಎಮ್.ಆರ್ ನಿರೂಪಿಸಿದರು.

Share This
300x250 AD
300x250 AD
300x250 AD
Back to top