Slide
Slide
Slide
previous arrow
next arrow

ಟಿ.ಎಸ್.ಎಸ್.ನಿಂದ ನೂತನ ‘ಟೈಗರ್ ಮೀಠಾಮಿಕ್ಸ್’ ಬಿಡುಗಡೆ

300x250 AD

ಶಿರಸಿ :ಅಡಿಕೆಯ ಮೌಲ್ಯವರ್ಧನೆಗಾಗಿ ಟಿ.ಎಸ್.ಎಸ್. ಈಗಾಗಲೇ ಸಿಹಿ ಅಡಿಕೆಯನ್ನು ತಯಾರಿಸಿ, ಭಾರತದಾದ್ಯಂತ ಮಾರುಕಟ್ಟೆಯನ್ನು ಕಲ್ಪಿಸಿದೆ. ಅಂತೆಯೇ ಈಗ ಸಂಘವು ಹೊಸದಾಗಿ “ಟಿ.ಎಸ್.ಎಸ್. ಟೈಗರ್ ಮೀಠಾಮಿಕ್ಸ್” ಉತ್ಪನ್ನವನ್ನು ತಯಾರಿಸಿದ್ದು, ಆ.23, ಮಂಗಳವಾರದಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಆಡಳಿತ ಮಂಡಳಿ ಸದಸ್ಯರು, ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಉತ್ಪನ್ನವು ಮೌತ್ ಫ್ರೆಶ್ನರ್‌ ಆಗಿದ್ದು, ತಂಬಾಕು ರಹಿತವಾಗಿರುತ್ತದೆ ಹಾಗೂ ಉತ್ತಮ ಸ್ವಾದದೊಂದಿಗೆ ರೂ. 2ರ ಪೌಚ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top