ಶಿರಸಿ : ತಾಲೂಕಿನ ಗೋಳಿಕಟ್ಟಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆ.23 ಮಂಗಳವಾರದಂದು ಅಜ್ಜರಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಡ್ನಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಕಿರಿಯರ ವಿಭಾಗದ ಛದ್ಮವೇಷದಲ್ಲಿ ಪ್ರೀತಮ್ ಕೇಶವ ಆಚಾರಿ ಪ್ರಥಮ, ಹಿರಿಯರ ವಿಭಾಗದ ಛದ್ಮ ವೇಷದಲ್ಲಿ ವರ್ಷಾ ಗೋಪಾಲ ಗೌಡ ಪ್ರಥಮ, ಕಿರಿಯರ ವಿಭಾಗದ ಕಥೆ ಹೇಳುವುದರಲ್ಲಿ ಸನ್ನಿಧಿ ಸುಬ್ರಹ್ಮಣ್ಯ ಪಂಡಿತ್ ತೃತೀಯ, ಹಿರಿಯರ ವಿಭಾಗದ ಕಥೆ ಹೇಳುವುದರಲ್ಲಿ ಭಾಗ್ಯಾ ಮಂಜುನಾಥ ಗೌಡ ದ್ವಿತೀಯ, ಹಿರಿಯರ ವಿಭಾಗದ ಸಂಸ್ಕೃತ ಪಠಣದಲ್ಲಿ ಅಂಜಲಿ ಚಂದ್ರ ಗೌಡ ದ್ವಿತೀಯ, ಕಿರಿಯ ವಿಭಾಗದ ಅಭಿನಯ ಗೀತೆಯಲ್ಲಿ ಸನ್ನಿಧಿ ಸುಬ್ರಹ್ಮಣ್ಯ ಪಂಡಿತ್ ದ್ವಿತೀಯ, ಹಿರಿಯರ ವಿಭಾಗದ ಅಭಿನಯ ಗೀತೆಯಲ್ಲಿ ಭಾಗ್ಯಾ ಮಂಜುನಾಥ ಗೌಡ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಪಾಲಕರು, ಪೋಷಕರು ಹಾಗೂ ಶಿಕ್ಷಕರು ಸಂತಸವನ್ನು ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದ್ದಾರೆ.
ಪ್ರತಿಭಾಕಾರಂಜಿ: ಗೋಳಿಕಟ್ಟಾ ಶಾಲೆಯ ವಿದ್ಯಾರ್ಥಿಗಳ ಸಾಧನೆ.
