ಕುಮಟಾ:ತಾಲೂಕಿನ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌದ ಕಟ್ಟಡದ ಕಾಮಗಾರಿ ಕೆಲಸವನ್ನು ಶಾಸಕ ದಿನಕರ ಶೆಟ್ಟಿ ವೀಕ್ಷಿಸಿ, ಗುತ್ತಿಗೆದಾರರಿಗೆ ಸಲಹೆ ಸೂಚನೆ ನೀಡಿದರು. ತ್ವರಿತಗತಿಯಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಜನರ ಸೇವೆಗೆ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಿದರು.
ಕುಮಟಾ ಮೂರುರು ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌದ 2019 ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2020 ರ ಜನವರಿಯಲ್ಲಿ ಸಚಿವರಾದ ಆರ್ ಅಶೋಕ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. 16 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌದ ರಾಜ್ಯದಲ್ಲಿಯೇ ಮೂರನೇ ದೊಡ್ಡ ವಿಧಾನ ಸೌಧ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು ಇದು ಶಾಸಕರ ಕನಸಿನ ಕೂಸಾಗಿತ್ತು. ಮಿನಿ ವಿಧಾನ ಸೌದದಲ್ಲಿ ಖಂದಾಯ ಇಲಾಖೆ ,ಉಪವಿಭಾಗಾಧಿಕಾರಿ ಕಛೇರಿ, ಭೂ ದಾಖಲೆ ಸಹಾಯಕ ನಿರ್ದೇಶಕರ ಕಛೇರಿ,ಉಪ ಖಜಾನೆ ಈ ಎಲ್ಲಾ ಸೇವೆಗಳು ಒಂದೇ ಕಡೆಯಲ್ಲಿ ಜನರಿಗೆ ಇನ್ನು ಮುಂದೆ ಲಭ್ಯವಾಗಲಿದೆ.
ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಗಳು ಆಗಮಿಸಿ ಮಿನಿ ವಿಧಾನಸೌದ ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಹಾಗೂ ಹಲವು ಸಚಿವರು ಕೂಡ ಆಗಮಿಸುವವರಿದ್ದಾರೆ.