Slide
Slide
Slide
previous arrow
next arrow

ಅರಬೈಲ್ ಘಾಟ್’ನಲ್ಲಿ ಟೈಲ್ಸ್ ತುಂಬಿದ ಲಾರಿ ಅಪಘಾತ

300x250 AD

ಯಲ್ಲಾಪುರ: ಲಾರಿಯೊಂದು ಪಲ್ಟಿಯಾಗಿ, ಪಲ್ಟಿಯಾದ ಲಾರಿಗೆ ಕಾರು ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅರಬೈಲ್ ಘಟ್ಟದಲ್ಲಿ ಸೋಮವಾರ ನಡೆದಿದೆ.

ಆಂಧ್ರದಿಂದ ಟೈಲ್ಸ್ ತುಂಬಿಕೊಂಡು ಮಂಗಳೂರು ಕಡೆಗೆ ಹೊರಟ ಸಂದರ್ಭದಲ್ಲಿ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಆ ಲಾರಿಗೆ ಕಾರು ಗುದ್ದಿದೆ. ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಲಾರಿ ಜಖಂಗೊಂಡಿದ್ದು, ಟೈಲ್ಸ್ ಒಡೆದು ಹಾನಿಯಾಗಿದೆ.

300x250 AD

ಲಾರಿ ಅಪಘಾತದಿಂದ ಹೆದ್ದಾರಿಯಲ್ಲಿ ಕೆಲವು ಸಮಯ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಪೊಲೀಸರು ಪ್ರಕರಣ ಪರಿಶೀಲಿಸಿದ್ದು,ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.

Share This
300x250 AD
300x250 AD
300x250 AD
Back to top