• Slide
  Slide
  Slide
  previous arrow
  next arrow
 • ಮೊಬೈಲ್ ಅಂಗಡಿ ಕಳ್ಳತನ: ಆರೋಪಿಗಳ ಬಂಧನ

  300x250 AD

  ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದ ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಯ ಸಹಕಾರದಿಂದ ಪೊಲೀಸರು ಬಂಧಿಸಿದ್ದಾರೆ.

  ತಾಲೂಕಿನ ಸಕಲಬೇಣದ ಸಿದ್ದಾರ್ಥ ನಾಯ್ಕ(30), ಕವಲಗದ್ದೆಯ ರಮಾಕಾಂತ ನಾಯ್ಕ(33) ಕಳವು ಮಾಡಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಮೊಬೈಲ್ ಅಂಗಡಿಯಲ್ಲಿ ಕಳ್ಳತನ ನಡೆಸಿರುವ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಇಬ್ಬರೂ ಆರೋಪಿಗಳು ಗುರುವಾರ(ಅಗಸ್ಟ್ 18) ನಸುಕಿನ ವೇಳೆಯಲ್ಲಿ ಅವರ್ಸಾದ ಸಂಜೀವ ನಾಯ್ಕ ಮಾಲೀಕತ್ವದ ಮೊಬೈಲ್ ಅಂಗಡಿಯ ಹಂಚು ತೆಗೆದು ಒಳಪ್ರವೇಶಿಸಿ ಅಲ್ಲಿರುವ ರಿಯಲ್‌ಮೀ ಕಂಪನಿಯ ಸಿ2 ಮಾದರಿಯ 12 ಸಾವಿರ ಮೌಲ್ಯದ 1 ಮೊಬೈಲ್, ಎಮ್‌ಐ ಕಂಪನಿಯ ನೋಟ್ 4 ಮಾದರಿಯ 1 ಮೊಬೈಲ್ ಹಾಗೂ 1 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು.

  300x250 AD

  ಕಳ್ಳತನ ಕುರಿತು ಮಾಲೀಕ ಸಂಜೀವ ಅಂಕೋಲಾ ಪೊಲೀಸರಿಗೆ ದೂರು ನೀಡಿದ್ದರು. ಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಪ್ರವೀಣಕುಮಾರ ಆರ್, ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿ ಪರಮೇಶ ಎಸ್, ಮಂಜುನಾಥ ಲಕ್ಕಾಪುರ, ಶ್ರೀಕಾಂತ ಕಟಬರ, ವಿಜಯ ಟಿ, ರಯೀಸ್ ಭಗವಾನ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top