• Slide
  Slide
  Slide
  previous arrow
  next arrow
 • ವಿಶ್ವಭಾರತಿಯಲ್ಲಿ ರಾಧಾ ಕೃಷ್ಣರ ಕಲರವ

  300x250 AD

  ಶಿರಸಿ: ಇಲ್ಲಿನ ವಿಶ್ವಭಾರತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅರವತ್ತಕ್ಕೂ ಅಧಿಕ ರಾಧಾ ಕೃಷ್ಣರು ತಮ್ಮ ವೈವಿಧ್ಯಮಯ ವೇಷಗಳಿಂದ ಗಮನ ಸೆಳೆದರು.

  ಶ್ರೀಕೃಷ್ಣಾಷ್ಠಮಿ‌ ಹಿನ್ನಲೆಯಲ್ಲಿ 2 ರಿಂದ 4 ಹಾಗೂ 4 ರಿಂದ 6 ವರ್ಷದ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯ ನಿರ್ಣಾಯಕರಾಗಿ ವಿಜಯಾ ದೇಶಪಾಂಡೆ, ಪ್ರತಿಮಾ ಸ್ವಾದಿ, ರವಿ ಭಟ್ ಪಾಲ್ಗೊಂಡಿದ್ದರು.

  ಕಿರಿಯರ ವಿಭಾಗದಲ್ಲಿ ಪ್ರಣಮ್ಯಾ ಹೆಗಡೆ ಪ್ರಥಮ, ಪರ್ಣಿಕ ಹೆಗಡೆ ಹಾಗೂ ರಿಷಿ ಆಚಾರಿ ದ್ವಿತೀಯ, ಸಾನ್ವಿ ಶೇಟ್, ಸಾದ್ವಿಕಾ ಭಟ್ ತೃತೀಯ ಬಹುಮಾನ ಪಡೆದರು. ಹಿರಿಯರ ವಿಭಾಗದಲ್ಲಿ ಮಹತಿ ಹೆಗಡೆ ಪ್ರಥಮ, ಆದ್ಯಾ ಹೆಗಡೆ ದ್ವಿತೀಯ, ಆರ್ಯ ಹೆಗಡೆ ಹಾಗೂ ಸಿರಿ ಭಟ್ಟ ತೃತೀಯ ಸ್ಥಾನ ಪಡೆದರು.

  300x250 AD

  ಮುಖ್ಯ ಸಂಸ್ಥಾಪಕಿ  ವೀಣಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಮೇಧಾ ಭಟ್ಟ ಅರಸಗೋಡು ಸ್ವಾಗತಿಸಿದರು. ಸಂಧ್ಯಾ ಹೆಗಡೆ ನಿರೂಪಿಸಿದರು. ಪುಷ್ಪಾ ಮಡಗಾಂವಕರ್, ರಶ್ಮಿ ‌ಭಟ್ಟ ಸಹಕಾರ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top