• Slide
  Slide
  Slide
  previous arrow
  next arrow
 • ಆ.29 ಕ್ಕೆ ರಾಮಕೃಷ್ಣ ಹೆಗಡೆಯವರ 96 ನೇ ಜನ್ಮದಿನೋತ್ಸವ

  300x250 AD

  ಶಿರಸಿ: ಈ ದೇಶ ಕಂಡ ಅಪರೂಪದ ರಾಜಕಾರಣಿ, ರಾಷ್ಟ್ರೀಯ ಧುರೀಣ, ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜೀ ವಾಣಿಜ್ಯ ಮಂತ್ರಿ, ರಾಷ್ಟ್ರೀಯ ಯೋಜನಾ ಆಯೋಗದ ಮಾಜೀ ಉಪಾಧ್ಯಕ್ಷರೂ ಹಾಗೂ ನಮ್ಮ ಜಿಲ್ಲೆಯವರೇ ಆದ ರಾಮಕೃಷ್ಣ ಹೆಗಡೆಯವರ 96 ನೇ ಜನ್ಮದಿನೋತ್ಸವವನ್ನು ಆ. 29, ಸೋಮವಾರ ಮುಂಜಾನೆ 9.30 ಘಂಟೆಗೆ ನಗರದ ಯಲ್ಲಾಪುರ ರಸ್ತೆಯಲ್ಲಿರುವ (ಕಾಲೇಜು ರಸ್ತೆ) ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಸ್ಥಾಪಿಸಿದ ಅವರ ಕಂಚಿನ ಪುತ್ಥಳಿಗೆ ದೀಪ ಬೆಳಗಿಸಿ ಪುಷ್ಪ ಹಾರ ಹಾಕಿ ಸಿಹಿ ಹಂಚುವ ಮೂಲಕ ಆಚರಿಸಲು ನಿಶ್ಚಯಿಸಲಾಗಿದೆ .

  ಅವರ ದೂರದರ್ಶಿತ್ವ, ಮುತ್ಸದ್ಧಿತನ, ಮೌಲ್ಯಾಧಾರಿತ ರಾಜಕಾರಣ ಹಾಗೂ ದೇಶಕ್ಕೆ, ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು ಸಂಸ್ಮರಣೀಯವಾಗಿದೆ. ಈಗಿನ ಜನತೆಗೆ ಅವರ ಮೌಲ್ಯ ಹಾಗೂ ಆದರ್ಶತನವನ್ನು ನೆನಪಿಸಲು ಅವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮಕ್ಕೆ ಅವರ ಎಲ್ಲಾ ಅಭಿಮಾನಿಗಳು ಪಾಲ್ಗೊಳ್ಳುವಂತೆ ಶ್ರೀ ರಾಮಕೃಷ್ಣ ಹೆಗಡೆ ಅಭಿಮಾನಿ ಬಳಗದ ಅಧ್ಯಕ್ಷ ವೆಂಕಟೇಶ ಹೆಗಡೆ ಹೊಸಬಾಳೆ ವಿನಂತಿಸಿದ್ದಾರೆ.

  300x250 AD

  ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು ರಾಜಕೀಯ ಪಕ್ಷಗಳು, ತಮ್ಮ ಪಕ್ಷದ ಯಾವುದೇ ಫಲಕಗಳನ್ನು ಪ್ರದರ್ಶಿಸಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .

  Share This
  300x250 AD
  300x250 AD
  300x250 AD
  Leaderboard Ad
  Back to top