ಕಾರವಾರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಬೆಳಗಾವಿ ಝೋನ್ ಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯ ವಿದ್ಯಾರ್ಥಿಗಳ ತಂಡ ಚಾಂಪಿಯನ್ ಟ್ರೋಫಿಗೆ ಮುತ್ತಿಕ್ಕಿದೆ.
ವಿದ್ಯಾರ್ಥಿಗಳಾದ ದೀಪಕ, ಈಶ್ವರ, ವಿರೇಶ, ಪ್ರತೀಕ, ಸುಜನ, ಚಂದನ, ಸುಮಂತ, ಅಂಕಿತ, ಮೋನು, ಗಗನ, ಗಂಗಾಧರ, ಧವನ, ತಹೀರ, ಅಭಿಷೇಕ ಮತ್ತು ಸಚಿನ್ ಈ ತಂಡದಲ್ಲಿದ್ದರು. ಮೊದಲನೇ ಪಂದ್ಯವನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೊಂದಿಗೆ ಗೆದ್ದ ಕಾರವಾರ ತಂಡ, ಕ್ವಾರ್ಟರ್ ಫೈನಲ್ಸ್ನಲ್ಲಿ ಸಂಜೀವಿನಿ ಫಾರ್ಮಸಿ ಕಾಲೇಜು ಹಾಗೂ ಸೆಮಿ ಫೈನಲ್‌ನಲ್ಲಿ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ತಂಡವನ್ನು ಸೋಲಿಸಿ ಫೈನಲ್ಸ್ಗೆ ಲಗ್ಗೆ ಇಟ್ಟಿತ್ತು. ದಾವಣಗೆರೆಯ ಎಸ್‌ಎಸ್‌ಐಎಂಎಸ್ ಕಾಲೇಜು ತಂಡದವರನ್ನ ಸೋಲಿಸಿದ ಕಾರವಾರ ತಂಡ, ಮೊದಲ ಬಾರಿಗೆ ಆರ್‌ಜಿಯುಎಚ್‌ಎಸ್ ಝೋನ್ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.
5 ಪಂದ್ಯದಲ್ಲಿ 101 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂದಿನ ಹಂತ ಇಂಟರ್‌ಝೋನಲ್ಸ್ ಪಂದ್ಯವು ಬೆಂಗಳೂರಿನ ಕೃಷ್ಣದೇವರಾಯ ದಂತ ವಿಜ್ಞಾನ ಕಾಲೇಜಿನಲ್ಲಿ ಸೆ.19ರಿಂದ 23ರವರೆಗೆ ನಡೆಯಲಿದೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಡಾ.ಗಜಾನನ ನಾಯಕ ಹಾಗೂ ಪ್ರಾಂಶುಪಾಲ ಡಾ.ಶಿವಕುಮಾರ ಜಿ.ಎಲ್. ಶುಭ ಹಾರೈಸಿದ್ದಾರೆ.