Slide
Slide
Slide
previous arrow
next arrow

ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ: ಕ್ರಮಕ್ಕೆ ಆಗ್ರಹ

300x250 AD

ಹೊನ್ನಾವರ: ತಾಲೂಕಿನಲ್ಲಿ ವೈಟ್ ಬೋರ್ಡ್ ಹೊಂದಿರುವ ಖಾಸಗಿ ವಾಹನದಲ್ಲಿ ನಿಯಮಮೀರಿ ಬಾಡಿಗೆ ರೂಪದಲ್ಲಿ ಸಾರ್ವಜನಿಕರನ್ನು ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಅಲ್ಲದೆ ಗ್ರಾಮೀಣ ಹಾಗೂ ಪಟ್ಟಣದ ಆಟೋ ರಿಕ್ಷಾದವರು ಕಿ.ಮೀ. ಮೀರಿ ಸಾಗುತ್ತಿದ್ದಾರೆ. ಇವುಗಳಿಗೆ ಕೂಡಲೇ ಕಡಿವಾಣ ಹಾಕುವಂತೆ ತಾಲೂಕಿನ ಮಂಕಿ ಟ್ಯಾಕ್ಸಿ ಚಾಲಕ- ಮಾಲಕರ ಸಂಘದವರಿಂದ ಆರ್‌ಟಿಓ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಮಂಕಿ ಪಿಎಸೈ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧ ಭಾಗದ ಖಾಸಗಿ ವೈಟ್ ಬೋರ್ಡ್ ಹೊಂದಿರುವ ವಾಹನದವರು ಸರ್ಕಾರಕ್ಕೆ ಆದಾಯ ತಪ್ಪಿಸಿ ನಿಯಮ ಉಲ್ಲಂಘನೆ ಮಾಡಿ ಈ ರೀತಿ ಮಾಡುತ್ತಿದ್ದಾರೆ. ಇದುವರೆಗೂ ಸೂಕ್ತ ರೀತಿಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕೊರೋನಾ ಆತಂಕದಿಂದ ಕಳೆದೆರಡು ವರ್ಷದಿಂದ ತೀವ್ರ ಆರ್ಥಿಕ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದು, ಇದೀಗ ಇವರಿಂದ ನಮ್ಮ ಹಳದಿ ಬೋರ್ಡ್ ವಾಹನವರಿಗೆ ನಷ್ಟ ಉಂಟಾಗುತ್ತಿದೆ. ಸ್ಥಳೀಯವಾಗಿರುವ ಆಟೋ ರಿಕ್ಷಾದವರು ತಮ್ಮ ಕಿ.ಮೀ. ವ್ಯಾಪ್ತಿಯನ್ನು ಮೀರಿ ಬಾಡಿಗೆಗೆ ಹೋಗುವುದರಿಂದ ಇವಿಎಂ ತುಂಬಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಯೂನಿಯನ್ ಅಧ್ಯಕ್ಷ ಶೇಖರ ಗೌಡ, ಕಾರ್ಯದರ್ಶಿ ಗಜಾನನ ಗೌಡ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಖಜಾಂಚಿ ಅನಿಲ ಹರಿಕಂತ್ರ ಹಾಗೂ ಸದಸ್ಯರು ಇದ್ದರು.

300x250 AD
Share This
300x250 AD
300x250 AD
300x250 AD
Back to top