Slide
Slide
Slide
previous arrow
next arrow

ಶಾಸಕಿ ರೂಪಾಲಿ ಜನ್ಮದಿನ: ಆರೋಗ್ಯ ಶಿಬಿರ,ಅನ್ನದಾನ, ವೃಕ್ಷಾರೋಪಣ ಕಾರ್ಯಕ್ರಮ

300x250 AD

ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಯುವ ಅಭಿಮಾನಿಗಳು ಶಾಸಕರಿಗೆ ಸೇಬು ಹಣ್ಣಿನ ಬೃಹತ್ ಹಾರ ಹಾಕುವ ಮೂಲಕ ಗಮನ ಸೆಳೆದರು. ಜತೆಗೆ ಕಾರವಾರ ಹಾಗೂ ಅಂಕೋಲಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಾಸಕರು ತಮ್ಮ ಕಾರ್ಯಾಲಯಕ್ಕೆ ಬರುತ್ತಿದ್ದಂತೆ ಯುವ ಅಭಿಮಾನಿಗಳು ವಿಶೇಷವಾಗಿ ತಯಾರಿಸಲಾದ ಸೇಬು ಹಣ್ಣಿನ ಬೃಹತ್ ಹಾರವನ್ನು ಹಾಕಿ ಸಂಭ್ರಮಿಸಿದರು.

ಜನ್ಮ ದಿನದ ಅಂಗವಾಗಿ ಬಿಜೆಪಿಯ ನಗರ ಹಾಗೂ ಗ್ರಾಮೀಣ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು, ಅಭಿಮಾನಿಗಳು ವಿವಿಧೆಡೆ ಧಾರ್ಮಿಕ, ಆರೋಗ್ಯ ಶಿಬಿರ, ಅನ್ನದಾನ, ವೃಕ್ಷಾರೋಪಣ ಮತ್ತಿತರ ಕಾರ್ಯಕ್ರಮ ಸಂಘಟಿಸಿದ್ದರು.

ಅಂಕೋಲಾದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿದಂತೆ ವಿವಿಧ ರೋಗಗಳ ತಪಾಸಣೆ, ಔಷದೋಪಚಾರ ನಡೆಸಲಾಯಿತು. ಕ್ರಿಸ್ತಮಿತ್ರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ, ಕಂತ್ರಿ ಊರಿನಲ್ಲಿ ವೃಕ್ಷಾರೋಪಣ, ಹುಲಿದೇವರವಾಡದಲ್ಲಿ ಸಾರ್ವಜನಿಕರಿಗೆ ತೆಂಗಿನಸಸಿ ವಿತರಣೆ, ಅಜ್ಜಿಕಟ್ಟಾದ ಆಶ್ರಮದಲ್ಲಿ ಅನ್ನದಾನ ನಡೆಸಲಾಯಿತು. ಕಾರವಾರದ ಘಾಡಸಾಯಿ ಗ್ರಾಪಂ ವ್ಯಾಪ್ತಿಯ ಪಾರ್ಶ್ವವಾಯು ಪೀಡಿತ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ರೋಗಿಗಳು, ಸಿಬ್ಬಂದಿ ಹಾಗೂ ಆ ಭಾಗದ ಕಿವುಡ, ಮೂಕ ಮಕ್ಕಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು.

ಅಂಕೋಲಾದ ಶಾಂತದುರ್ಗಾ ದೇವಾಲಯ, ಹಣಕೋಣ ಸಾತೇರಿ ದೇವಾಲಯ, ದುರ್ಗಾದೇವಿ ದೇವಸ್ಥಾನ, ಅಮದಳ್ಳಿ ವೀರಗಣಪತಿ ದೇವಾಲಯ, ಶೆಜ್ಜೇಶ್ವರ ದೇವಾಲಯ, ಕದ್ರಾ ಮಹಾಮ್ಮಾಯಾ ದೇವಾಲಯ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಲವು ಗಣ್ಯರ ಭೇಟಿ: ವಿಧಾನ ಪರಿಷತ ಸದಸ್ಯ ಗಣಪತಿ ಉಳ್ವೇಕರ್, ನಗರಸಭಾ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ್, ಯುವಮೋರ್ಚಾ ನಗರ ಅಧ್ಯಕ್ಷ ಶುಭಂ ಕಳಸ, ಕಾರ್ಯದರ್ಶಿ ಪರಬತ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಮಿತ್ ನಾಯ್ಕ್,ನಾಗರಾಜ್ ದುರ್ಗೇಕರ,ಭರತ್ ಕುಡ್ತಲಕರ, ಅಮರ್ ನಾಯ್ಕ್, ಶೇಖರ ನಾಯ್ಕ್, ಸಂದೇಶ ಬಾಡಕರ, ಅಕ್ಷಯ್ ರೇವಣಕರ, ಅಶೋಕ್ ಪಟೇಲ್, ಅಜಯ್ ಜೋಶಿ, ಅಭಿಷೇಕ್ ಹರಿಕಂತ್ರ, ನಿಕೇತ ಮಾಜಾಳಿಕರ, ನಗರ ಬಿಜೆಪಿ ಅಧ್ಯಕ್ಷ ನಾಗೇಶ್ ಕುರುಡೆಕರ, ನಗರ ಸಭಾ ಸದಸ್ಯ ರಾದ ರವಿರಾಜ್ ಅಂಕೊಲೇಕರ್, ರೋಶನಿ ಮಾಳ್ಸೇಕರ, ಮಾಲಾ ಹುಲಸ್ವಾರ, ಸಂಧ್ಯಾ ಬಾಡಕರ್, ಸುಜಾತಾ ತಾಮಸೆ, ಮನೋಜ್ ಬಾಂದೇಕರ್, ಹನುಮಂತ ತಳವಾರ ಹಾಗೂ ಸದಸ್ಯರು, ಮಹಿಳಾ ಮೋರ್ಚಾ ಅಧ್ಯಕ್ಷೆ ವಂದನಾ ಶಿರೋಡಕರ ಹಾಗೂ ಸದಸ್ಯರು, ರೋಷನ್ ವೆರ್ಣೇಕರ್, ದೇವಿದಾಸ ಕಂತ್ರಿಕರ, ಗ್ರಾಮೀಣ ಬಿಜೆಪಿ ಅಧ್ಯಕ್ಷ ಸುಭಾಷ್ ಗುನಗಿ, ಆಶಾ ನಾಯ್ಕ್,ಸುಜಾತಾ ಬಾಂದೇಕರ, ಯುವಮೋರ್ಚಾ ತಂಡದ ಪ್ರಣವ ರಾಣೆ ಹಾಗೂ ಸದಸ್ಯರು, ನಂದಕಿಶೋರ್, ಪೂಜಾ ನಾಯ್ಕ್, ಉದಯ ನಾಯ್ಕ, ಗ್ರಾಮ ಪಂಚಾಯಿತ ಅಧ್ಯಕ್ಷರು, ಸದಸ್ಯರು ಮತ್ತಿತರರು ಆಗಮಿಸಿ ಶುಭಾಶಯಗಳನ್ನು ಸಲ್ಲಿಸಿದರು.

300x250 AD

ದೂರವಾಣಿ ಮೂಲಕ ಶುಭಾಶಯ: ಶಾಸಕಿ ರೂಪಾಲಿ ಎಸ್.ನಾಯ್ಕ ಜನ್ಮ ದಿನಕ್ಕೆ ನಿಕಟಪೂರ್ವ ಮುಖ್ಯಮಂತ್ರಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಸಿಎಂ ಪ್ರಮೋದ ಸಾವಂತ, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರುಗಳು, ಶಾಸಕರುಗಳು, ಕಾರ್ಯಕರ್ತರು, ಪಕ್ಷದ ಪ್ರಮುಖರು, ಅಭಿಮಾನಿಗಳು ದೂರವಾಣಿ ಮೂಲಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಕೋಟ್…

ನನ್ನ ಜನ್ಮದಿನವನ್ನು ಕ್ಷೇತ್ರದ ಜನತೆ, ಗಣ್ಯರು ತಮ್ಮ ಮನೆ ಮಗಳ ಜನ್ಮದಿನದಂತೆ ಆಚರಿಸಿದ್ದು ನನಗೆ ಹೃದಯತುಂಬಿ ಬಂದಿದೆ. ಪಕ್ಷದ ನಾಯಕರು, ಪ್ರಮುಖರು, ಕಾರ್ಯಕರ್ತರು, ಕಾರವಾರ ನಗರ, ಗ್ರಾಮೀಣ ಮಂಡಲ, ಅಂಕೋಲಾ ಮಂಡಲ, ವಿವಿಧ ಮೋರ್ಚಾ, ಪ್ರಕೋಷ್ಠಗಳ ಪದಾಧಿಕಾರಿಗಳು, ಸದಸ್ಯರು ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಅವರೆಲ್ಲರಿಗೆ ಕೃತಜ್ಞನಾಗಿದ್ದೇನೆ. ಚಿರಋಣಿಯಾಗಿದ್ದೇನೆ. ಎಲ್ಲರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ.

· ರೂಪಾಲಿ ಎಸ್.ನಾಯ್ಕ, ಶಾಸಕಿ

Share This
300x250 AD
300x250 AD
300x250 AD
Back to top