Slide
Slide
Slide
previous arrow
next arrow

ಕಾರು ಪಲ್ಟಿಯಾಗಿ ಮಹಿಳೆ ದುರ್ಮರಣ

300x250 AD

ಮುಂಡಗೋಡ: ಕಾರೊಂದು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಡ್ಡ ಬಂದ ಎಮ್ಮೆ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬಸ್ ಡಿಪೋ ನಿರ್ಮಾಣ ಸ್ಥಳದ ಬಳಿ ನಡೆದಿದೆ.

ರೂಪಾಲಿ ಗುದಲಿ (43) ಅಪಘಾತದಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಮುರ್ಡೇಶ್ವರ ದೇವಸ್ಥಾನಕ್ಕೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಕುಟುಂಬದ 7 ಸದಸ್ಯರು ಕಾರಿನಲ್ಲಿ ತೆರಳುತ್ತಿದ ಸಂದರ್ಭದಲ್ಲಿ ಮುಂಡಗೋಡದಲ್ಲಿ ನಿರ್ಮಿಸುತ್ತಿರುವ ಬಸ್ ಡಿಪೋ ಸಮೀಪ ರಸ್ತೆ ಮೇಲೆ ಅಡ್ಡ ಬಂದ ಎಮ್ಮೆ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೆ ಮೃತಪಟ್ಟಿದ್ದು, ಇನ್ನೂ ಆರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರಿಗೆ ಇಲ್ಲಿಯ ತಾಲುಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಪಡಿಸಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top