ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳ್ಳಟ್ಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕರೆಂಟ್ ಕಂಬಕ್ಕೆ ಮರವೊಂದು ಚಾಚಿದೆ. ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ರೀತಿ ಆ ಮರವನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಕೆಇಬಿಯ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ ವರ್ಗವೆ ನೇರಹೊಣೆಯನ್ನು ಹೊರಬೇಕು ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ತಾಲೂಕು ಅಧ್ಯಕ್ಷ ರಾಜೇಶ ನಾರಾಯಣ ನಾಯ್ಕ ಕತ್ತಿ ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಇದೇ ರೀತಿ ಸಿದ್ದಾಪುರ ತಾಲೂಕಿನ ಸಾಕಷ್ಟು ಹಳ್ಳಿಗಳಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಮಳೆಗಾಲ ಶುರುವಾಗಿ ತಿಂಗಳುಗಳೆ ಕಳೆದಿದೆ. ಯಾವುದೇ ರೀತಿ ವಿದ್ಯುತ್ ಕಂಬದ ಆಸುಪಾಸಿನ ಮರಗಳ ಕಟಾವು ನಡೆದಿಲ್ಲ, ಅಧಿಕಾರಿಗಳು ಬೇಜವಬ್ದಾರಿ ತೋರುತ್ತಿದ್ದಾರೆ. ಲೈನ್‌ಗಳಿಗೆ ಜಂಗಲ್ ಹತ್ತಿರುವುದನ್ನು ಆದಷ್ಟು ಬೇಗ ಕಟಾವು ಮಾಡಬೇಕು. ಈ ಬಳ್ಳಟ್ಟೆ ಗ್ರಾಮದ ಸಮಸ್ಯೆ ಸುಮಾರು ಒಂದು ವಾರವೇ ಕಳೆದಿದೆ.ಆದರೇ ಈ ಅನಾಹುತವನ್ನು ತಪ್ಪಿಸುವ ಕೆಲಸವನ್ನು ಮಾಡದೇ ಅನಾಹುತ ಸಂಭವಿಸುವವರೆಗೂ ಬೇಜವಬ್ದಾರಿ ತೋರಿಸಿ ಮೈಮರೆತಿರುವುದು ಸರಿಯಲ್ಲಾ. ಆದಷ್ಟು ಬೇಗ ಈ ವಿಷಯಕ್ಕೆ ಸಂಬಂಧಿಸಿದಂತೆ ಆ ಮರವನ್ನು ತೆರವುಗೊಳಿಸಬೇಕು. ಈ ಸಮಸ್ಯೆಯನ್ನು ಪರಿಹರಿಸದೇಇದ್ದಲ್ಲಿಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.