Slide
Slide
Slide
previous arrow
next arrow

ಸಾಧಕರಿಗೆ ಸನ್ಮಾನ, ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ

300x250 AD

ಸಿದ್ದಾಪುರ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ತಾಲೂಕಿನ ಶಿರಳಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿರಳಗಿ ಗ್ರಾಮ ಪಂಚಾಯತ, ಸೇವಾ ಸಹಕಾರಿ ಸಂಘ, ಹಾಲು ಉತ್ಪಾದಕರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಗ್ರಾಮ ಪಂಚಾಯತ ಅಧ್ಯಕ್ಷೆ ಲತಾ ಆರ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೇನಾಧಿಕಾರಿ ವಿನಾಯಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಮಚಂದ್ರ ಕೆ.ನಾಯ್ಕ, ನಾರಾಯಣ ಕೆ.ನಾಯ್ಕ, ರವೀಂದ್ರ ಆರ್.ಹೆಗಡೆ, ಗಂಗಾಧರ ಕೊಳಗಿ,ಈರ ಕೆ.ನಾಯ್ಕ, ಕೆರೆಸ್ವಾಮಿ ಎಂ.ಗೌಡರ್, ಸೋಮಶೇಖರ ಎಸ್.ಗೌಡರ್, ರಘುನಂದನ ಎಸ್.ಭಟ್ ಇವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಪ್ರೌಢಶಾಲೆಗೆ ಮೊದಲ ೩ ಸ್ಥಾನಗಳನ್ನು ಪಡೆದ ಜೀವನ ನಾಯ್ಕ, ಮಾನಸ ನಾಯ್ಕ, ಮಾನ್ಯ ಎನ್.ಚೆನ್ನಯ್ಯ ಇವರನ್ನುಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

300x250 AD

ಗ್ರಾಮ ಪಂಚಾಯತ ಅಧ್ಯಕ್ಷೆ ಲತಾ ಆರ್.ನಾಯ್ಕ, ಉಪಾಧ್ಯಕ್ಷ ಶ್ರೀಕಾಂತ ಎಲ್. ಭಟ್ಟ, ಮುಖ್ಯ ಅತಿಥಿ ಗಂಗಾಧರ ಕೊಳಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಈರ ಕೆ.ನಾಯ್ಕ ಮಾತನಾಡಿದರು. ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪರಶುರಾಮ ಕೆ.ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಆರ್.ಜಿ.ನಾಯ್ಕ ಕೋಡ್ಸರ, ತಾಲೂಕು ಸೇವಾದಳದ ಅಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಹಾಗೂ ಗ್ರಾ.ಪಂ ಸದಸ್ಯರು, ಊರ ನಾಗರಿಕರು, ಶಿಕ್ಷಕರು ಉಪಸ್ಥಿತರಿದ್ದರು. ಪಿಡಿಓ ಗೌರೀಶ ಹೆಗಡೆ ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕಿ ಉಷಾ ನಿರೂಪಿಸಿದರು. ಗೋವಿಂದಪ್ಪ ವಂದಿಸಿದರು.

Share This
300x250 AD
300x250 AD
300x250 AD
Back to top