ಯಲ್ಲಾಪುರ: ದೇಶದ ಎಲ್ಲಾ ಧರ್ಮ, ಭಾಷೆಗಳು, ರಾಷ್ಟ್ರೀಯ ಏಕೀಕರಣ ಹಾಗೂ ಕೋಮು ಸೌಹಾರ್ದತೆಯ ಮಹತ್ವ ಎತ್ತಿ ಹಿಡಿದಿವೆ. ಪ್ರತಿಯೊಬ್ಬ ವ್ಯಕ್ತಿ ದೇಶಾಭಿಮಾನವವನ್ನು ಬೆಳೆಸಿಕೊಂಡು ದೇಶದ ಸಂಸ್ಕಾರಯುತ ಪ್ರಜೆಗಳಾಗೋಣ ಎಂದು ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಅವರು ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಂಘಟಿಸಿದ್ದ ಸದ್ಭಾವನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರು. ಭಾರತ ದೇಶ ಸರ್ವಧರ್ಮಗಳ ಆಶ್ರಯ ತಾಣ. ನಾವೆಲ್ಲರೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳೋಣ ಎಂದರು.ತಾ.ಪಂ ಇಒ ಜಗದೀಶ ಕಮ್ಮಾರ ಮಾತನಾಡಿ, ಜಾಯಿ, ಮತ, ಪ್ರದೇಶ, ಭಾಷರ ಬೇಧ ಭಾವವಿಲ್ಲದೇ ಭಾವೈಕ್ಯತೆಯ ಗುಣಗಳನ್ನು ಬೆಳೆಸಿಕೊಳ್ಳೋಣ ಎಂದರು.
ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ದೇಶದ ನಾಗರಿಕರಾದ ನಾವು ಭಾವೈಕ್ಯತೆ, ಸೌಹಾರ್ದ ಗುಣಗಳನ್ನು ಬೆಳೆಸಿಕೊಳ್ಳೋಣ ಎಂದರು. ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಫಾ.ಬಸ್ತ್ಯಾಂವ ನಜರತ್, ಮುಸ್ಲಿಂ ಧರ್ಮಗುರು ಮಹಮ್ಮದ್ ಮನ್ಸೂರ್, ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ನಂದನ ಬಾಳಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ, ಮುಖ್ಯಾಧ್ಯಾಪಕ ಸಂಜಯ ನಾಯಕ ಉಪಸ್ಥಿತರಿದ್ದರು. ಬಿಇಒ ಎನ್.ಆರ್.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಂಘಟಕ, ಸ್ಕೌಟ್ ಮತ್ತು ಗೈಡ್ಸ್ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಶಿಲ್ಪಾ ವಂದಿಸಿದರು.
ಸ್ಕೌಟ್ ಮತ್ತು ಗೈಡ್ಸ್, ಎನ್.ಸಿ.ಸಿ, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.