• Slide
    Slide
    Slide
    previous arrow
    next arrow
  • ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-22: ಫಲಿತಾಂಶ ಪ್ರಕಟ

    300x250 AD

    ಯಲ್ಲಾಪುರ : ಸುಜ್ಞಾನ ನೆಟ್‌ವರ್ಕ್ ಯಲ್ಲಾಪುರ ಅವರ ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ವತಿಯಿಂದ ಯಲ್ಲಾಪುರದ ರಂಗಸಹ್ಯಾದ್ರಿ ಹಾಗೂ ಗೌತಮ್ ಜುವೆಲ್ಲರ‍್ಸ್ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಏರ್ಪಡಿಸಲಾಗಿದ್ದ ಎರಡನೇ ವರ್ಷದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-22 ರ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.

    ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಈ ಸ್ಪರ್ಧೆಯ ಫಲಿತಾಂಶವನ್ನು ಬಿಡುಗಡೆಗೊಳಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ವಕೀಲರಾದ ಎನ್.ಆರ್.ಭಟ್ ಬಿದ್ರೇಪಾಲ್, ದೇವಾಲಯದ ಮೊಕ್ತೇಸರರಾದ ಗೋಪಾಲಕೃಷ್ಣ ಭಟ್ ವೈದಿಕರಮನೆ, ಹಿರಿಯ ಪತ್ರಕರ್ತರಾದ ಜಿ.ಎನ್.ಭಟ್ ತಟ್ಟಿಗದ್ದೆ ಹಾಗೂ ಸ್ಥಳೀಯ ಪ್ರಮುಖರಾದ ಮಹಾಬಲೇಶ್ವರ ಭಾಗ್ವತ್ ಗುಡ್ನಮನೆ, ಇ – ಯಲ್ಲಾಪುರ ಮಾಧ್ಯಮದ  ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಈ ಫಲಿತಾಂಶವನ್ನು ಬಿಡುಗಡೆಗೊಳಿಸಿದರು.

    ಸ್ಪರ್ಧಾ ಫಲಿತಾಂಶಗಳು ಇಂತಿವೆ: ಪ್ರಥಮ ; ಆಯುಷ್ ಪ್ರಶಾಂತ ಹೆಗಡೆ. ಲಕ್ಕಿಜಡ್ಡಿ. ಸಿದ್ಧಾಪುರ.,ದ್ವಿತೀಯ ; ಸ್ತುತಿ ಅಕ್ಷಯ ಭಟ್ ಶಿರಸಿ.,ತೃತೀಯ ; ಹನೀಶ್ ಗೌಡ ಗುಳ್ಳಾಪುರ.

    ಸಮಾಧಾನಕರ ಬಹುಮಾನಗಳು: ಜತೀನ್ ಗೌಡ ಕಾರವಾರ. ಭುವನ್ಯಾ ಹೆಗಡೆ ಶಿರಸಿ.,  ತೇಜಸ್ ನಾಯ್ಕ. ಯಲ್ಲಾಪುರ.,  ರಿಶಾ ಡಿಕೋಸ್ಟಾ ಶಿರಸಿ.,  ರಿಶಿ ದೇಸಾಯಿ ಜೋಯ್ಡಾ, ಚತುರ್ವಿ ಕೃಷ್ಣ ಭಟ್ ಶಿರಸಿ., ಅನ್ವಿ ಮಂಜುನಾಥ ಭಟ್ ಯಲ್ಲಾಪುರ., ಸುವಿನ್ ಹೆಗಡೆ ಬಿಸ್ಲಕೊಪ್ಪ. ,ಆರಾಧ್ಯಾ ಭೋವಿವಡ್ಡರ್ ಯಲ್ಲಾಪುರ.,ಆಶಿಷ್ ಹೆಗಡೆ ಯಲ್ಲಾಪುರ.

    300x250 AD

    ಈ ಸ್ಪರ್ಧೆಯ ನಿರ್ಣಾಯಕರಾಗಿ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿದ್ವಾನ್ ಸುಬ್ರಹ್ಮಣ್ಯ ಭಟ್, ಭಾರತೀ ನೃತ್ಯ ಕಲಾಕೇಂದ್ರದ ಮುಖ್ಯಸ್ಥರಾದ ನೃತ್ಯಗುರು ಸುಮಾ ಹೆಗಡೆ ತೊಂಡೆಕೆರೆ,ಯಲ್ಲಾಪುರದ ಪತ್ತಾರ್ ಫೋಟೋ ಸ್ಟುಡಿಯೋ ಮಾಲಿಕರಾದ ಗಣೇಶ ಪತ್ತಾರ್ ಕಾರ್ಯನಿರ್ವಹಿಸಿದರು.

    ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸದ್ಯದಲ್ಲಿಯೇ ನಗದು ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರವನ್ನು ವಿತರಿಸಿ, ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top