Slide
Slide
Slide
previous arrow
next arrow

ದೀರ್ಘ ಕಾಲದ ಜಪ, ಪ್ರಾರ್ಥನೆಯಿಂದ ಖಿನ್ನತೆ ತೊಲಗುತ್ತದೆ: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ಖಿನ್ನತೆಗೆ ಒಳಗಾಗದೇ ಇರಲು ಪ್ರತಿಯೊಬ್ಬರೂ ದೇವರಲ್ಲಿ ಭಕ್ತಿ ಬೆಳಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಲಹೆ ಮಾಡಿದರು.

ಸ್ವರ್ಣವಲ್ಲೀ ಮಠದಲ್ಲಿ ಭರತನಳ್ಳಿ ಸೀಮಾ ಶಿಷ್ಯರಿಂದ ಚಾತುರ್ಮಾಸ್ಯ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದ ಅವರು, ದೀರ್ಘ ಕಾಲದ ಜಪ, ಪ್ರಾರ್ಥನೆ ಮಾಡುವರಿಂದ ಅನೇಕ ಪ್ರಯೋಜನ ಇದೆ. ಖಿನ್ನತೆ ಹೋಗಲಾಡಿಸಲು ದೇವರಲ್ಲಿ ಶ್ರದ್ಧೆಯ ಭಕ್ತಿ ಅನುಭವ ಮನಸ್ಸಿನಲ್ಲಿ ಬೆಳಸಿಕೊಳ್ಳಬೇಕು. ಅದಕ್ಕೆ ಎಲ್ಲವೂ ಸಹಕಾರಿ ಆಗುತ್ತದೆ ಎಂದರು.ಋಷಿಗಳು ದೀರ್ಘಕಾಲ ಜಪ, ಪ್ರಾರ್ಥನೆ, ಪೂಜೆ ತೊಡಗುವದರಿಂದ ಆಯುಷ್ಯ ಕೂಡ ದೀರ್ಘ ಆಗುತ್ತದೆ. ಆಯುಷ್ಯ ದೀರ್ಘವಾಗಿರಲು ಆರೋಗ್ಯ ಸ್ವಸ್ಥವಾಗಿ ಇರುತ್ತದೆ. ಆಯುಷ್ಯ ಸ್ವಸ್ಥವಾಗಿ ಇರಲು ಬೇಕಾಗುವ ಮಾನಸಿಕ, ದೈಹಿಕ ಆರೋಗ್ಯ ಸಿಗುತ್ತದೆ. ಇವತ್ತಿನ ದೊಡ್ಡ ಸಮಸ್ಯೆ ಎಂದರೆ ಖಿನ್ನತೆಯಾಗಿದೆ. ಅತಿಯಾದ ಚಿಂತನೆಯೇ ಖಿನ್ನತೆ ಆಗಿದೆ. ಒಂದು ಸಲ ಮನಸ್ಸಿಗೆ ಖಿನ್ನತೆ ಆವರಿಸಿದರೆ ಅನೇಕ ದಿನಗಳ ಕಾಲ ಕಾಡುತ್ತದೆ. ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಚಿಂತಾಕ್ರಾಂತ ಸ್ಥಿತಿ ಖಿನ್ನತೆ ಎಲ್ಲರಿಗೂ ಬರುತ್ತದೆ ಎಂದೂ ಆಧುನಿಕ ವಿಜ್ಞಾನ ಎನ್ನುತ್ತದೆ. ಎಲ್ಲರಿಗೂ ಇರುತ್ತದೆ ಎಂಬ ವಾದ ನಾವು ಒಪ್ಪುವದಿಲ್ಲ ಎಂದರು.

ಖಿನ್ನತೆ ಎಂಬ ಮನೋರೋಗ ಬಾರದೇ ಇರಲು, ಬಂದರೂ ಹೋಗಲಾಡಿಸಲು ಭಕ್ತಿಯೇ ಮುಖ್ಯ ಪರಿಹಾರ. ಮಾನಸಿಕ ತೀವ್ರತೆ ಶಾರೀರಿಕ ತೀವ್ರತೆಗೆ ಕಾರಣವಾಗುತ್ತದೆ. ಕೆಲವರಿಗೆ ಹುಚ್ಚಾಗುತ್ತದೆ. ವಿಪರೀತವಾಗದಂತೆ ಮನಸ್ಸನ್ನು ಸರಿ ಮಾಡಿಸಿಕೊಳ್ಳಬೇಕು. ಅದಕ್ಕೆ ಭಕ್ತಿಯೇ ಪರಿಹಾರ, ಒಳ್ಳೆಯ ಉಪಾಯ. ಗೀತೆಯ ಅಭಿಪ್ರಾಯದಲ್ಲಿ ಆಸುರಿ ಸಂಪತ್ತು. ಭಕ್ತಿ ದೈವೀ ಸಂಪತ್ತು. ಇವೆರಡೂ ಪರಸ್ಪರ ವಿರೋಧದದ್ದು. ದೈವೀ ಸಂಪತ್ತು ಇದ್ದವರಿಗೆ ಆಸುರಿ ಸಂಪತ್ತು ಬರೋದಿಲ್ಲ ಎಂಬ ವಾದ ನಮ್ಮದು ಎಂದರು.ಭಕ್ತಿ ಇಟ್ಟುಕೊಂಡರೆ ಅನೇಕ ರೋಗಗಳೇ ಬರೋದಿಲ್ಲ. ಅನೇಕ ರೋಗಗಳಿಗೆ ಔಷಧ ಇದ್ದಂತೆ. ಮನಸ್ಸು ಹಗುರ ಭಗವಂತನಿಂದ ಆಗುತ್ತದೆ. ಭಕ್ತಿ ಮೂಲಕವೇ ಇದನ್ನು ಕರಗಿಸಿಕೊಳ್ಳಬಹುದು. ದಿನಾಲೂ ಹಾಲು ಕುಡಿಯುತ್ತಿದ್ದರೆ ಅನೇಕ ರೋಗ ಬರೋದಿಲ್ಲ. ದಿನವೂ ಭಕ್ತಿ ಇಟ್ಟುಕೊಂಡರೆ ಮನಸ್ಸಿನ ರೋಗ ಬಾರದಂತೆ ನೋಡಿಕೊಳ್ಳುತ್ತದೆ. ಹಾಲು ಶರೀರಕ್ಕೆ ಪುಷ್ಠಿ ಕೊಟ್ಟರೆ ಭಕ್ತಿ ಮನಸ್ಸಿಗೆ ಪುಷ್ಠಿ ಕೊಡುತ್ತದೆ. ನಾವು ಮಾಡುವ ಜಪ, ಅನುಷ್ಠಾನಗಳು ಭಕ್ತಿ ಭಾವ ಬೆಳಸಿಕೊಳ್ಳಲು ಸಹಕಾರ ಆಗುತ್ತದೆ ಎಂದ ಶ್ರೀಗಳು ಹಿತ್ಲಳ್ಳಿ ನಾಗೇಂದ್ರ ಭಟ್ಟ ಅವರಿಗೆ ಪ್ಲೋರಿಡಾ ವಿಶ್ವ ವಿದ್ಯಾಲಯದ ನೀಡಿದ ಗೌರವ ಡಾಕ್ಟರೇಟ್ ನೀಡಿದ್ದು ದೇಶಕ್ಕೇ ಹೆಮ್ಮೆ. ಇಂಥ ಒಬ್ಬ ವಿದ್ವಾಂಸರು ನಮ್ಮವರು ಎಂಬುದು ನಮ್ಮ ಹೆಮ್ಮೆ ಎಂದೂ ಶ್ಲಾಘಿಸಿ ಅವರನ್ನು ಶ್ರೀಗಳು ಗೌರವಿಸಿದರು.

300x250 AD

ಭರತನಳ್ಳಿ ಸೀಮೆ ಎಂಬುದು ಚೆಂದದ ಹೆಸರು. ಭರತ ಎಂಬ ಚಕ್ರವರ್ತಿ, ನಾಟ್ಯ ಶಾಸ್ತ್ರ ಬರೆದ ಭರತ ಮುನಿ ಕೂಡ ಇದ್ದಾರೆ. ಸೀಮೆಯಲ್ಲಿ ರಾಜನಂಥವರೂ, ಋಷಿ ಅಂಥವರೂ ಇದ್ದಾರೆ. ಪ್ರಾಥಃಸ್ಮರಣೀಯ ಸರ್ವಜ್ಞೇಂದ್ರರೂ ಅದೇ ಸೀಮೆಯವರು ಆಗಿದ್ದರು. ಭರತನಳ್ಳಿ ಸೀಮೆ ಹೆಸರಿಗೆ ತಕ್ಕಂತೆ ಅರ್ಥವತ್ತಾಗಿದೆ.- ಸ್ವರ್ಣವಲ್ಲೀ ಶ್ರೀ

Share This
300x250 AD
300x250 AD
300x250 AD
Back to top