• Slide
    Slide
    Slide
    previous arrow
    next arrow
  • ಲಯನ್ಸ ಕ್ಲಬ್’ನಿಂದ ಸಾಂಸ್ಕೃತಿಕ ಸ್ಫರ್ಧೆ

    300x250 AD

    ಶಿರಸಿ: ಲಯನ್ಸ ಕ್ಲಬ್ ಶಿರಸಿ ಪ್ರಾಯೋಜಕತ್ವದಲ್ಲಿ ಆಝಾದಿ ಕಾ ಅಮೃತ ಮಹೋತ್ಸವ ಆಚರಣೆಯ ನಿಮಿತ್ತ ಆ. 17ರಂದು ಲಯನ್ಸ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಸಲಾಯಿತು. ಶಾಲೆಯ ನಾಲ್ಕು ತಂಡಗಳ ನಡುವೆ ಅತ್ಯಂತ ಸೃಜನಾತ್ಮಕವಾಗಿ ಈ ಸ್ಫರ್ಧೆ ನಡೆಯಿತು. ಪ್ರತಿ ಗುಂಪಿಗೆ 20 ನಿಮಿಷಗಳ ಸಮಯಾವಕಾಶ ನೀಡಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ಸುಕರಾಗಿದ್ದರು. ನಾಲ್ಕು ತಂಡಗಳ ನಡುವೆ ನಡೆದ ಈ ಸ್ಫರ್ಧೆಯಲ್ಲಿ ಕ್ರಮವಾಗಿ ಕಪಿಲ್ ದೇವ್ ತಂಡ ಪ್ರಥಮ, ಎ.ಪಿ.ಜೆ ಅಬ್ದುಲ್ ಕಲಾಂ ತಂಡ ದ್ವಿತೀಯ, ಸರ್ ಎಂ ವಿಶ್ವೇಶ್ವರಯ್ಯ ತಂಡ ತೃತೀಯ ಹಾಗೂ ಸುಧಾಮೂರ್ತಿ ತಂಡ ಚತುರ್ಥ ಬಹುಮಾನ ಗಳಿಸಿತು.

    ಕಾರ್ಯಕ್ರಮದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎನ್ ವಿ.ಜಿ.ಭಟ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಶಂಸಿಸುತ್ತ , ಮುಂಬರುವ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಲಯನ್ಸ್ ಕ್ಲಬ್ ವತಿಯಿಂದ ಇನ್ನೂ ಹೆಚ್ಚಿನ ಮೈಕ್ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆಯಿತ್ತರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ತ್ರಿವಿಕ್ರಮ್ ಪಟವರ್ಧನ್, ಉಪಾಧ್ಯಕ್ಷರಾದ ಎಂ ಜೆ ಎಫ್ ಲಯನ್ ಪ್ರಭಾಕರ್ ಹೆಗಡೆ ,ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪ್ರೊ. ಲ.ರವಿ ನಾಯಕ್, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಎಂ ಜೆ ಎಫ್ ಲ.ರಮಾ ಪಟವರ್ಧನ್ ಹಾಗೂ ಲಯನ್ಸ್ ಕ್ಲಬ್ ಸದಸ್ಯರಾದ ಲ.ಜ್ಯೋತಿ ಹೆಗಡೆ ,ಪಾಲಕರು,ಶಾಲೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

    300x250 AD

    ಈ ಸಂದರ್ಭದಲ್ಲಿ ಶಾಲೆಯ ಗ್ರಂಥಾಲಯದ ಕ್ಯಾಂಪಸ್ ಮಾಸಪತ್ರಿಕೆ ಬಿಡುಗಡೆ ಮಾಡಲಾಯಿತು.ಅಲ್ಲದೆ ಆಝಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಫರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಅಲ್ಲದೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ತಂಡಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶಶಾಂಕ್ ಹೆಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನೂ ಸ್ವಾಗತಿಸಿದರು.ಸಹಶಿಕ್ಷಕಿ ಶ್ರೀಮತಿ ಅನಿತಾ ಭಟ್ ವಂದಿಸಿದರು.ಸಹಶಿಕ್ಷಕಿ ಶ್ರೀಮತಿ ರೇಷ್ಮಾ ಮಿರಾಂದ್ ಕಾರ್ಯಕ್ರಮ ನಿರೂಪಿಸಿದರು. ಶಿರಸಿ ಲಯನ್ಸ ಕ್ಲಬ್ ಸದಸ್ಯರು, ಶಿರಸಿ ಲಯನ್ಸ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕವೃಂದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    Share This
    300x250 AD
    300x250 AD
    300x250 AD
    Leaderboard Ad
    Back to top