ಶಿರಸಿ :ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.18 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಚರ್ಚ ರಸ್ತೆಯ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಸಭಾಭವನದಲ್ಲಿ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ.
ಒಂದು ಶಾಲೆಯಿಂದ 2 ಮಕ್ಕಳು ಕೃಷ್ಣ ವೇಷದಲ್ಲಿ ಭಾಗವಹಿಸಬಹುದು.6 ವರ್ಷದ ಒಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕೃಷ್ಣನ ಜೊತೆ ರಾಧೆ, ಯಶೋಧೆ, ಸುಧಾಮ, ಅರ್ಜುನ, ಬಲರಾಮ, ಇತ್ಯಾದಿ ಛದ್ಮವೇಷಗಳನ್ನು ಪ್ರಸ್ತುತಪಡಿಸಬಹುದು. ನೃತ್ಯ ಹಾಗೂ ವ್ಯಕ್ತಿಗತ ಭಾಗವಹಿಸುವಿಕೆಗೆ ಬೇರೆ ಬಹುಮಾನವಿದೆ. ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಒಂದು ಶಾಲೆಯಿಂದ ಒಂದು ದೇಶ ಭಕ್ತರ ಛದ್ಮವೇಷಕ್ಕೆ ಅವಕಾಶವಿದೆ, ಎಂದು ಬಿ.ಕೆ.ವೀಣಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.