Slide
Slide
Slide
previous arrow
next arrow

ನಿಸ್ರಾಣಿಯಲ್ಲಿ ಟಿ.ಎಸ್.ಎಸ್ ಮಿನಿ ಸುಪರ್ ಮಾರ್ಕೆಟ್ ಉದ್ಘಾಟನೆ

300x250 AD

ಶಿರಸಿ: ನಗರದ ಪ್ರತಿಷ್ಠಿತ ದಿ ತೋಟಗಾರ್ಸ್ ಕೋ -ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಹಾಗೂ ತೋಟಗಾರಿಕಾ ಸೇವಾ ಸಹಕಾರಿ ಸಂಘ ನಿ., ನಿಸ್ರಾಣಿ ಇವರ ಸಹಯೋಗದೊಂದಿಗೆ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನ ಘಟಕವನ್ನು ನಿಸ್ರಾಣಿ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಆ.17 ಬುಧವಾರ ದೀಪ ಬೆಳಗಿಸುವುದರ ಮೂಲಕವಾಗಿ ಟಿ.ಎಸ್.ಎಸ್. ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನಿರ್ದೇಶಕರುಗಳು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ನಿಸ್ರಾಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಆರ್.ಮನೋಹರ್.ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿಸ್ರಾಣಿ ಘಟಕದಲ್ಲಿರುವ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನಲ್ಲಿ ದಿನಸಿಗಳು, ಗೃಹಬಳಕೆ ಉತ್ಪನ್ನಗಳು, ಬಟ್ಟೆಗಳು, ಪಾದರಕ್ಷೆಗಳು,ಸ್ಟೀಲ್ ಸಾಮಗ್ರಿಗಳು, ಪಶು ಆಹಾರಗಳು ಹಾಗೂ ಸಮಗ್ರ ಕೃಷಿ ಅಗತ್ಯತೆಗಳು ಲಭ್ಯವಿರುತ್ತದೆ.ಶುಭಾರಂಭದ ಪ್ರಯುಕ್ತ ಎಲ್ಲಾ ವಸ್ತುಗಳ ಮೇಲೆ ವಿಶೇಷ ಕೊಡುಗೆಗಳು ಲಭ್ಯವಿದ್ದು,ಸದಸ್ಯರು ಹಾಗೂ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top