Slide
Slide
Slide
previous arrow
next arrow

ಭೈರುಂಭೆಯಲ್ಲಿ ‘ಕಾಲಚಕ್ರ’ ನಾಟಕ

300x250 AD

ಶಿರಸಿ: ತಾಲೂಕಿನ ಗೆಳೆಯರ ಬಳಗ ಭೈರುಂಭೆ (ರಿ) ಹಾಗೂ ಸ್ಥಳೀಯ ಕಲಾಸಕ್ತರ ಸಹಯೋಗದೊಂದಿಗೆ ರಂಗ ಸಮೂಹ ಮಂಚಿಕೇರಿಯವರಿಂದ ‘ಕಾಲಚಕ್ರ’ ಎಂಬ ಎರಡಂಕದ ಸ್ವತಂತ್ರ ಸಾಮಾಜಿಕ ನಾಟಕವನ್ನು ಆ. 19 ಶುಕ್ರವಾರ ಸಂಜೆ 6-30 ರಿಂದ ಹುಳಗೋಳ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರದರ್ಶಿಸಲಿದ್ದಾರೆ.

ಮೂಲತಃ ಈ ಮರಾಠಿ ನಾಟಕವನ್ನು ಜಯವಂತ ದಳ್ವಿ ರಚಿಸಿದ್ದು ಅದನ್ನು ಕನ್ನಡಕ್ಕೆ ಎಚ್. ಕೆ. ಕರ್ಕೇರಾ ಅನುವಾದಿಸಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಹುಲುಗಪ್ಪ ಕಟ್ಟಿಮನಿ ಮಾಡಿದ್ದು, ಸಹನಿರ್ದೇಶನ ಸಾಲಿಯಾನ್ ಉಮೇಶ ನಾರಾಯಣ ನಿರ್ವಹಿಸಿದ್ದಾರೆ. ರಾಮಕೃಷ್ಣ ಭಟ್ ದುಂಡಿ ನಾಟಕದ ಸಂಚಾಲಕರಾಗಿದ್ದಾರೆ.

300x250 AD

ರಂಗದಲ್ಲಿ ನಾಗರಾಜ ಹೆಗಡೆ, ಉಮ್ಮಚಗಿ, ನಿರ್ಮಲ ಹೆಗಡೆ. ಗೋಳಿಕೊಪ್ಪ, ಎಂ.ಕೆ.ಭಟ್ಟ ಯಡಳ್ಳಿ, ಸುಭೋಧ ಹೆಗಡೆ ಮಳಗಿಮನೆ, ಕಿರಣ ಹೆಗಡೆ. ಕಾನಗೋಡ, ರಿಯಾ ಫರ್ನಾಂಡಿಸ್, ಪ್ರಕಾಶ ಭಟ್ಟ, ತುಂಬೇಬೀಡು,ಅಮೃತ ಪೂಜಾರಿ ಬೆದೆಹಕ್ಲು, ವಿಕಾಸ ನಾಯಕ ಮಂಚಿಕೇರಿ ಶಾಂತರಾಮ ಹೆಗಡೆ ಬಿದ್ರಳ್ಳಿ, ಸಾಗರ ಹೆಗಡೆ ಮಂಚಿಕೇರಿ, ಕೃಷ್ಣಮೂರ್ತಿ ಶಾಸ್ತ್ರಿ ಕೆರೆಗದ್ದೆ ಕಾಣಿಸಿಕೊಳ್ಳಲಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಟಕವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಸಂಘಟಕರು ಸರ್ವರಿಗೂ ಸ್ವಾಗತವನ್ನು ಕೋರಿರುತ್ತಾರೆ.

Share This
300x250 AD
300x250 AD
300x250 AD
Back to top