• Slide
    Slide
    Slide
    previous arrow
    next arrow
  • ಸಂಸ್ಮರಣ ಕಾರ್ಯಕ್ರಮ, ತಾಳಮದ್ದಲೆ

    300x250 AD

    ಶಿರಸಿ: ಯಕ್ಷಗಾನ ಕಲಾವಿದ ದಿವಂಗತ ವೆಂಕಟರಮಣ ರಾಮಚಂದ್ರ ಹೆಗಡೆ ಕಂಚಿಕೈಯವರ ಸಂಸ್ಮರಣೆ ಮತ್ತು ತಾಳಮದ್ದಲೆ ಕಾರ್ಯಕ್ರಮವನ್ನು ಕಂಚಿಕೈಯಲ್ಲಿ ಆ. 21 ರ ಸಂಜೆ 3.30 ಕ್ಕೆ ಏರ್ಪಡಿಸಲಾಗಿದೆ.

    ವಸುಂಧರಾ ಸಮೂಹ ಸೇವಾ ಸಂಸ್ಥೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗ ಮತ್ತು ಕಂಚಿಕೈ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ ಎಲ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು ಯಕ್ಷರಂಗ ಸಂಪಾದಕ ಗೋಪಾಲಕೃಷ್ಣ ಭಾಗವತ ಕಡತೋಕ, ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ, ಮತ್ತು ಕಲಾ ಪೋಷಕ ಶಂಕರ ಹೆಗಡೆ ಕಿಬ್ಬಳ್ಳಿ ಅತಿಥಿಯಾಗಿ ಪಾಲ್ಗೊಳ್ಳುವರು. ಹಿರಿಯ ಕಲಾವಿದ ಜಿ.ಎಂ. ಭಟ್ಟ ಕೆ ವಿ ಸಂಸ್ಮರಣ ನುಡಿಗಳನ್ನು ಆಡುವರು.

    300x250 AD

    ಇದೇ ಸಂದರ್ಭದಲ್ಲಿ, ವಾಲಿ ಮೋಕ್ಷ ಆಖ್ಯಾನದ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ಎಂ.ಪಿ. ಹೆಗಡೆ, ಪ್ರಭಾಕರ ಹೆಗಡೆ, ಗಜಾನನ ಹೆಗಡೆ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಡಾ. ಜಿ ಎಲ್. ಹೆಗಡೆ, ನಾರಾಯಣ ಯಾಜಿ, ಆರ್.ಟಿ. ಭಟ್ಟ ಮತ್ತು ನಿರ್ಮಲಾ  ಹೆಗಡೆ ಗೋಳಿಕೊಪ್ಪ ಭಾಗವಹಿಸುವರು.

    Share This
    300x250 AD
    300x250 AD
    300x250 AD
    Leaderboard Ad
    Back to top