Slide
Slide
Slide
previous arrow
next arrow

ಅಮೃತಮಹೋತ್ಸವದ ಸವಿನೆನಪಿಗಾಗಿ ಶಾಲೆಗೆ ಸ್ಮಾರ್ಟ್ ಟಿ.ವಿ. ದೇಣಿಗೆ

300x250 AD

ಸಿದ್ದಾಪುರ: ತಾಲ್ಲೂಕಿನ ಬಾಳೇಸರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣದ ಜೊತೆ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಊರಿನ ಸಮಸ್ತ ನಾಗರಿಕರು ಭಾಗಿಯಾಗಿರುವುದು ವಿಶೇಷವಾಗಿತ್ತು.

ಊರಿನ ಹಿರಿಯರು, ಅನೇಕ ಸಂಘಸಂಸ್ಥೆಗಳ ಸ್ಥಾಪಕರು ಮತ್ತು ಈ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಶಂಕರ ಸುಬ್ರಾಯ ಭಟ್ಟ ಮಸ್ಗುತ್ತಿ ದಂಪತಿಗಳು ಅಮೃತಮಹೋತ್ಸವದ ಸವಿನೆನಪಿಗಾಗಿ ಶಾಲೆಗೆ ಎರಡು ಸ್ಮಾರ್ಟ ಟಿ.ವಿ. ಗಳನ್ನು ದೇಣಿಗೆ ನೀಡಿ, ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪರವಾಗಿ ದಂಪತಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಹೆಗಡೆ ತಂಗಾರಮನೆ ಮಾತನಾಡಿ ಶಂಕರ ಭಟ್ಟ ಮಸ್ಗುತ್ತಿ ಇವರು ಊರಿನ ಹಾಗೂ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರು ಈ ದಿನ 90 ವರ್ಷಕ್ಕೂ ಮೇಲ್ಪಟ್ಟ ಈ ದಂಪತಿಗಳು ಅಮೃತಮಹೋತ್ಸವದ ಈ ಸಂದರ್ಭದಲ್ಲಿ ನಮ್ಮ ಜೊತೆಗಿರುವುದು ಮತ್ತು ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ ಭಟ್ಟ ಮಸ್ಗುತ್ತಿಯವರು “ನನ್ನೊಬ್ಬನಿಂದ ಯಾವ ಕೆಲಸವು ಆಗಿಲ್ಲ, ಊರವರೆಲ್ಲರ ಸಹಕಾರದಿಂದ ನಾನು ಅಳಿಲು ಸೇವೆಯನ್ನು ಮಾಡಿದ್ದೇನೆ. ಬೇರೆ ಬೇರೆ ಸಂಘಸಂಸ್ಥೆಗಳಿಂದ ಅಭೂತಪೂರ್ವ ಗೌರವ ಸನ್ಮಾನಗಳು ದೊರೆತಿವೆ, ಆದರೆ ಈ ಅಮೃತಮಹೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ವಯೋದಂಪತಿಗಳನ್ನು ಕರೆದು ಸನ್ಮಾನಿರುವುದು ಧನ್ಯತಾ ಭಾವ ಮತ್ತು ನೆಮ್ಮದಿಯನ್ನು ನೀಡಿದೆ. ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಶಾಲೆಯ ಅಭಿವೃದ್ಧಿ ಕುರಿತು ಮತ್ತು ಮಕ್ಕಳ ಕಲಿಕೆಯ ಕುರಿತು ಹೆಚ್ಚಿನ ಗಮನ ನೀಡುತ್ತಿರುವುದು ಸಂತೋಷದ ವಿಷಯ. ಇದೇ ರೀತಿ ಮುಂದುವರಿಯಲಿ” ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಇನ್ನೊಂದು ಟಿ.ವಿಯನ್ನು ದೇಣಿಗೆಯಾಗಿ ನೀಡಿದ ಸೀತಾರಾಮ ಎಮ್.ಭಟ್ಟ ಶಮೆಮನೆ ಇವರನ್ನು ಸನ್ಮಾನಿಸಲಾಯಿತು. ಇದರಿಂದಾಗಿ ಸಂಪೂರ್ಣವಾಗಿ ಬಾಳೇಸರ ಶಾಲೆಯು ತಾಲೂಕಿನಲ್ಲಿಯೇ ಎಲ್ಲಾ ತರಗತಿಗಳಿಗೆ ಇ-ಕಲಿಕಾ ವ್ಯವಸ್ಥೆ ಹೊಂದಿದ ಶಾಲೆಯಾಗಿ ಗುರುತಿಸಿಕೊಂಡಂತಾಗಿದೆ.

300x250 AD

ಸಿ.ಆರ್.ಪಿ. ಗಣೇಶ ಕೊಡಿಯಾರವರು ಇಲಾಖೆ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಶಾಲೆಯ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ. ಇಡೀ ಊರಿಗೆ ಊರೇ ಈ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾರುವುದಕ್ಕೆ ಸಂತೋಷವಾಗುತ್ತಿದೆ, ಅಲ್ಲದೆ ಹಿರಿಯರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಆಯೋಜಿರುವುದಕ್ಕೆ ಇಲಾಖೆಯ ಪರವಾಗಿ ಶಿಕ್ಷಕವೃಂಧ ಹಾಗೂ ಎಸ್.ಡಿ.ಎಮ್.ಸಿಯವರಿಗೆ ಧನ್ಯವಾದ ತಿಳಿಸಿದರು. ಗ್ರಾಮ ಪಂಚಾಯತ ಸದಸ್ಯರಾದ ಶ್ರೀಲಕ್ಷ್ಮೀ ಹೆಗಡೆ ಮತ್ತು ಶ್ಯಾಮಲಾ ಹಸ್ಲರ ಇವರು ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದರು. ಮುಖ್ಯಾಧ್ಯಾಪಕರಾದ ರಾಜು ನಾಯ್ಕ ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಚೇತನಾ ಹೆಗಡೆ, ಭಾರತಿ ಹೆಗಡೆ ಮತ್ತು ಕುಮಾರ ಎಂ. ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ,ಸಹಕರಿಸಿದರು.

Share This
300x250 AD
300x250 AD
300x250 AD
Back to top