ಮುಂಡಗೋಡ: ತಾಲೂಕಿನ ಇಂದೂರ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಏರ್ಪಟ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ಬಡಿಗೇರ ಹಾಗೂ ಉಪಾಧ್ಯಕ್ಷರಾಗಿ ಕಲ್ಲೇಶ ಸುಣಗಾರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ಬಡಿಗೇರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಜಿಯಾ ಬೇಗಂ ಗೌಳಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಲ್ಲೇಶ ಸುಣಗಾರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮರಾಜ ನಡಿಗೇರ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದು ಮತಗಳನ್ನು ಎಣಿಕೆ ಮಾಡಿದಾಗ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ಬಡಿಗೇರ 13 ಮತಗಳನ್ನು ಹಾಗೂ ಉಪಾಧ್ಯಕ್ಷ ಸ್ಥಾನದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಲ್ಲೇಶ ಸುಣಗಾರ 13 ಮತಗಳನ್ನು ಪಡೆದರು.
ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳು 3 ಮತಗಳು ಪಡೆದು ಸೊಲನ್ನೊಪ್ಪಿಕೊಂಡರು. ಅಧ್ಯಕ್ಷರಾಗಿ ರೇಣುಕಾ ಬಡಿಗೇರ, ಉಪಾಧ್ಯಕ್ಷರಾಗಿ ಕಲ್ಲೇಶ ಸುಣಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಚುನಾವಣಾಧಿಕಾರಿಯಾಗಿ ಅಕ್ಷರದಾಸೋಹ ಅಧಿಕಾರಿ ರಫೀಕ ಮೀರಾನಾಯಕ್ ಕಾರ್ಯನಿರ್ವಸಿದರು.
ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಧುರಿಣ ಬಿ.ಕೆ.ಪಾಟೀಲ, ನಿಕಟಪೂರ್ವ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ, ಮಹ್ಮದರಫೀಕ ದೇಸಳ್ಳಿ, ರವಿ ದುಗ್ಗಳ್ಳಿ,ಕೆಂಜೋಡಿ ಗಲಿಬಿ, ಬಿಸ್ಟನ್‌ಗೌಡ ಪಾಟೀಲ, ಪರುಶರಾಮ ತಹಶೀಲ್ದಾರ, ವೈ.ಪಿ.ಭುಜಂಗಿ, ಸುನೀಲ ವರ್ಣೇಕರ, ಮಂಜುನಾಥ, ಅಶೋಕ ತಡಸದ, ಸಾಬಜಾನ ಮಳ್ಳಗಟ್ಟಿ, ಎಸ್.ಎಸ್.ಸೊರಣ್ಣವರ, ಶಿವಪ್ಪ ಮಳಲಿ, ಬಸವರಾಜ ಹೊಂಡದಕಟ್ಟಿ, ಕಲ್ಮೇಶ ಬಡಿಗೇರ ಸೇರಿದಂತೆ ಮುಂತಾದವರು ಇದ್ದರು.