Slide
Slide
Slide
previous arrow
next arrow

ಶಾಸಕ ಶೆಟ್ಟಿಯಿಂದ ಸ್ವಾತಂತ್ರ್ಯದ ಘನತೆಗೆ ಹಾನಿ: ಸೂರಜ ನಾಯ್ಕ ಆರೋಪ

300x250 AD

ಕುಮಟಾ: ತಾಲೂಕಾಡಳಿತದಿಂದ ಮಣಕಿ ಮೈದಾನದಲ್ಲಿ ನಡೆದ ಸರಕಾರಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕರು ಕ್ಷೇತ್ರದಲ್ಲಿದ್ದರೂ ಭಾಗವಹಿಸದೇ ಸ್ವಾತಂತ್ರ್ಯೋತ್ಸವದ ಘನತೆಯನ್ನು ಕುಂದಿಸಿದ್ದಾರೆ ಎಂದು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಆರೋಪಿಸಿದ್ದಾರೆ.

ತಾಲೂಕಾಡಳಿತ ನಡೆಸುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಅಧ್ಯಕ್ಷತೆ ವಹಿಸಬೇಕಾಗಿರುವುದು ಸರಕಾರಿ ನಿಯಮ. ಬೇರೆ ಯಾವುದಾದರೂ ಕಾರ್ಯಕ್ರಮದಲ್ಲಿ ಶಾಸಕರು ಗೈರಾದರೆ ಒತ್ತಡದ ಕೆಲಸವಿರಬಹುದು ಎನ್ನಬಹುದು. ಆದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಸಾರ್ವಜನಿಕರಿಗೂ ಕೂಡ ಮನೆಯಲ್ಲಿಯೇ ಹರ್ ಘರ್ ತಿರಂಗಾದ ಮೂಲಕ ಧ್ವಜಾರೋಹಣ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಶಾಸಕ ದಿನಕರ ಶೆಟ್ಟಿ ಅವರು ತಾಲೂಕಾ ಮಟ್ಟದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸದೇ ಸ್ವಾತಂತ್ರ್ಯೋತ್ಸವಕ್ಕೆ ಅವಮಾನವೆಸಗಿದ್ದಾರೆ ಎಂದಿದ್ದಾರೆ.

300x250 AD

ರಾಷ್ಟ್ರಾಭಿಮಾನ ಮೆರೆಯವುದೇ ಮೊದಲಾದರೆ ಅದಕ್ಕಿಂತ ದೊಡ್ಡ ಕೆಲಸ ಮತ್ತೊಂದಿರಲು ಸಾಧ್ಯವೇ ಇಲ್ಲ. ಬಾಯಲ್ಲಿ ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ಹಾಗೆ ಕುಮಟಾ ಶಾಸಕರು ಕ್ಷೇತ್ರದ ಜನರನ್ನು ಮೂರ್ಖರನ್ನಾಗಿಸಲು ಹೊರಟಿರುವುದು ಎದ್ದು ಕಾಣುತ್ತಿದೆ. ಕ್ಷೇತ್ರದ ಎಲ್ಲ ಜನರು ತಮ್ಮ ತಮ್ಮ ಮನೆಯಲ್ಲಿ ಪಕ್ಷ ಬೇಧವನ್ನು ಮರೆತು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆದು ಸರಕಾರದ ಆದೇಶವನ್ನು ಪಾಲಿಸಿದ್ದಾರೆ. ಆದರೆ ಬಿಜೆಪಿ ಸರಕಾರದ ಶಾಸಕರೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಕ್ಷೇತ್ರದ ರಾಷ್ಟ್ರಾಭಿಮಾನಿ ಜನತೆಗೆ ಸಾಕಷ್ಟು ನೋವಾಗಿದ್ದು, ಅವರು ತಕ್ಷಣವೇ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದಿದ್ದಾರೆ.

Share This
300x250 AD
300x250 AD
300x250 AD
Back to top