Slide
Slide
Slide
previous arrow
next arrow

ಲಿಯೋ ಕ್ಲಬ್ ಶಿರಸಿಗೆ ಗೊಂಗ್ ಮತ್ತು ಗಾವೆಲ್ ವಿತರಣೆ

300x250 AD

ಶಿರಸಿ: ನಗರದ ಲಯನ್ಸ ಶಾಲೆಯ ಲಿಯೋ ಕ್ಲಬ್ ಶಿರಸಿಗೆ ಲಿಯೋ ಕ್ಲಬ್ ಡಿಸ್ಟಿಕ್ಟ್ ಕೋ ಚೇರ್ ಪರ್ಸನ್ ಲಯನ್ ಅಶೋಕ ಹೆಗಡೆಯವರು ಗೊಂಗ್ ಮತ್ತು ಗಾವೆಲ್ ಗಳನ್ನು ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಶಿರಸಿ ಲಿಯೋ ಕ್ಲಬ್ ಅಧ್ಯಕ್ಷೆ ಕುಮಾರಿ ಅನನ್ಯಾ ಅಶ್ವತ್ಥ ಹೆಗಡೆ, ಕಾರ್ಯದರ್ಶಿ ಕುಮಾರಿ ಶ್ರೇಯಾ ಬಡಿಗೇರ ಖಜಾಂಚಿ ಕುಮಾರಿ ಪೂರ್ವಿ ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ ಅವರಿಂದ ಈ ಸಲಕರಣೆಗಳನ್ನು ಸ್ವೀಕರಿಸಿದರು. ಲಯನ್ಸ ರೀಜನಲ್ ಚೇರ್ ಪರ್ಸನ್ ಎಂ.ಜೆಎಫ್.ಲಯನ್ ಜ್ಯೋತಿ ಭಟ್, ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಎಂ.ಜೆಎಫ್.ಲಯನ್ ರಮಾ ಪಟವರ್ಧನ, ಕೋಶಾಧ್ಯಕ್ಷರಾದ ಲಯನ್ ರಾಜಲಕ್ಷ್ಮಿ ಹೆಗಡೆ, ಶಿರಸಿ ಲಿಯೋ ಕ್ಲಬ್ ಮಾರ್ಗದರ್ಶಕರಾದ ಲಯನ್ ಅಶ್ವತ್ಥ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲಿಯೋ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಗೊಂಗ್ ಮತ್ತು ಗಾವೆಲ್ ಸಹಾಯಕವಾಗಲಿ ಎಂದು ಸರ್ವರೂ ಆಶಿಸಿದರು. ಶಿರಸಿ ಲಯನ್ಸ ಕ್ಲಬ್ ಸದಸ್ಯರು, ಶಿರಸಿ ಲಯನ್ಸ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕವೃಂದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

300x250 AD
Share This
300x250 AD
300x250 AD
300x250 AD
Back to top