• Slide
    Slide
    Slide
    previous arrow
    next arrow
  • ಜಿಲ್ಲೆಯಾದ್ಯಂತ ಸಂಭ್ರಮ ಸಡಗರದ ಸ್ವಾತಂತ್ರ್ಯೋತ್ಸವ

    300x250 AD

    ಸಿದ್ದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯೋತ್ಸವದಲ್ಲಿ ತಹಶೀಲ್ದಾರ್ ಸಂತೋಷ ಭಂಡಾರಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ 2021–22ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ 6 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಆನಂದ ನಾಯ್ಕ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಅಜಿತ್ ಕೊಡಿಯ, ಕಂಚಿನ ಪದಕ ಗೆದ್ದ ಜಯಂತ ನಾಯ್ಕರನ್ನು ಸನ್ಮಾನಿಸಲಾಯಿತು.


    ಅಂಕೋಲಾ ತಾಲೂಕಿನ ಕಣಗೀಲ ಮೀನುಗರರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜು ಹರಿಕಂತ್ರ ಸಂಘದ ಆಡಳಿತ ಕಚೇರಿಯಲ್ಲಿ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.


    ಲಯನ್ಸ್ ಕ್ಲಬ್ ಅಂಕೋಲಾ (ಸಿಟಿ) ಭಾರತೀಯ ನೌಕಾಸೇನೆಯ ತಟರಕ್ಷಕ ಪಡೆಯ ಅಧಿಕಾರಿಗಳನ್ನು ಭೇಟಿ ಮಾಡಿ ವಿನಂತಿಸಿ, 6*4 ಅಳತೆಯ ತ್ರಿವರ್ಣ ಧ್ವಜವನ್ನು ತಟರಕ್ಷಕ ಪಡೆಯ ಅಧಿಕಾರಿಗಳಾದ ಜಿ.ಕೆ.ರಾಯ್‌ರವರಿಗೆ ಗೌರವಪೂರ್ವಕವಾಗಿ ಸಮರ್ಪಿಸಿತು. ಸ್ವಾತಂತ್ರ್ಯ ದಿನದಂದು ಬೇಲೆಕೇರಿಯ ಸಮುದ್ರ ತಟದಲ್ಲಿ 125 ಅಡಿ ಎತ್ತರದ ಕಾವಲು ಗೋಪುರದ ಮೇಲೆ ಧ್ವಜ ಹಾರಾಡಿ ಭಾರತದ ಸ್ವಾತಂತ್ರ್ಯ ಹೋರಾಟದ ಸ್ಥಳದ ಹೆಮ್ಮೆಯನ್ನು ಶ್ರೀಮಂತ ಇತಿಹಾಸವನ್ನು ಬಿಂಬಿಸಿತು.


    ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯಲ್ಲಿರುವ ಸ್ವಾತಂತ್ರ್ಯ ಯೋಧರ ನೆನಪಿನ ಸ್ಥೂಪಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಪ್ರದೀಪ ವಾಸರೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.


    ಕರಬಂಧಿ ಚಳವಳಿಯ ಕೇಂದ್ರವಾಗಿದ್ದ ಅಂಕೋಲಾ ಸಮೀಪದ ಸೂರ್ವೆ ಗ್ರಾಮದ ಹಿರಿಯ ಸ್ವಾತಂತ್ರ್ಯ ಯೋಧ, ಶತಾಯುಷಿ ವೆಂಕಣ್ಣ ನಾಯಕ ಹಾಗೂ ಅವರ ಪತ್ನಿ ಪಾರ್ವತಿ ನಾಯಕ ಅವರನ್ನು ಅವರ ಮನೆಯಂಗಳದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ತಾಲೂಕು ಕಸಾಪ ಘಟಕದಿಂದ ಶಾಲು ಹೊದಿಸಿ ಸನ್ಮಾನಿಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು.

    300x250 AD


    ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಕಾರವಾರದ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಆಯೋಗದ ಅಧ್ಯಕ್ಷ ಸುರೇಂದ್ರ ಕುಮಾರರವರು ಧ್ವಜಾರೋಹಣ ಮಾಡಿದರು.


    ದಾಂಡೇಲಿ ನಗರಾಡಳಿತ ಮತ್ತು ತಾಲ್ಲೂಕಾಡಳಿತದ ಸಂಯುಕ್ತಾ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮ, ಸಡಗರದಿಂದ ಹಳೆ ನಗರಸಭಾ ಮೈದಾನದಲ್ಲಿ ಆಚರಿಸಲಾಯಿತು. ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಧ್ವಜಾರೋಹಣ ನೆರವೇರಿಸಿದರು.


    ಸಿದ್ದಾಪುರ ತಾಲೂಕಿನ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಸ್ವಾತಂತ್ರ‍್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಯಕುಮಾರ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top