Slide
Slide
Slide
previous arrow
next arrow

ಮಾಜಿ ಯೋಧನಿಗೆ ಜನಶಕ್ತಿ ವೇದಿಕೆಯಿಂದ ಸನ್ಮಾನ

300x250 AD


ಕಾರವಾರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಮಾಜಿ ಯೋಧ ಕಶ್ಮೀರ್ ಫಿಲಿಪ್ ರೊಸಾರಿಯೋ ಅವರಿಗೆ ಜನಶಕ್ತಿ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
1932ರಲ್ಲಿ ಜನಿಸಿದ್ದ ಕಶ್ಮೀರ್ ಅವರಿಗೆ ಈಗ 90 ವರ್ಷ. ತಮ್ಮ 15ನೇ ವರ್ಷ ವಯಸ್ಸಿನಲ್ಲಿ 1947ರಲ್ಲಿ ಭೂಸೇನೆಗೆ ಸಿಪಾಯಿಯಾಗಿ ನೇಮಕಾತಿಗೊಂಡ ಅವರು, 25 ವರ್ಷಗಳ ಸೇವೆ ಸಲ್ಲಿಸಿ 1972ರಲ್ಲಿ ಸೇವಾ ನಿವೃತ್ತಿ ಹೊಂದಿದ್ದರು. ಇವರು ಕಾಶ್ಮೀರದಿಂದ ಛಂಡೀಗಡದವರೆಗೆ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದರು. 1971 ಭಾರತ- ಪಾಕ್ ಯುದ್ಧದ ಸಂದಭದಲ್ಲಿ ಆರ್ಮಿ ಯುನಿಟ್‌ನಲ್ಲಿದ್ದ ಇವರು, ಯುದ್ಧದ ಮಾರನೇ ವರ್ಷ ನಿವೃತ್ತಿಯಾದರು.
ಇವರ ಸೇವೆಯನ್ನು ಪರಿಗಣಿಸಿ ಜನಶಕ್ತಿ ವೇದಿಕೆಯು ಸೋಮವಾರ ಭಾರತದ 76ನೇ ಸ್ವಾತಂತ್ರ್ಯೋತ್ಸವ ಶುಭ ಸಂದರ್ಭದಲ್ಲಿ ನಗರದ ಜೆಇಒ ಮಿಲ್ ರೋಡ್‌ನಲ್ಲಿರುವ (ಮೋರ್ ಸೂಪರ್ ಮಾರ್ಕೆಟ್ ಎದುರಿನ ರಸ್ತೆ) ಅವರ ಮನೆಗೆ ತೆರಳಿ ಸನ್ಮಾನಿಸಿತು. ಪೇಟ ತೊಡಿಸಿ, ಶಾಲು ಹೊದಿಸಿ, ಫಲತಾಂಬೂಲ ಹಾಗೂ ಉಡುಗೊರೆಯೊಂದನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಮದರ್ ಥೆರೆಸಾ ಸಂಸ್ಥೆಯ ಸ್ಯಾಮ್ಸನ್ ಡಿಸೋಜಾ, ಸ್ವಾತಂತ್ರ್ಯ ದಿನಾಚರಣೆಯೆಂದರೆ ಕೇವಲ ಧ್ವಜ ಹಾರಿಸೋದಲ್ಲ, ಇಂಥವರನ್ನ ಗುರುತಿಸಿ ಗೌರವಿಸುವುದು ಅತಿ ಶ್ರೇಷ್ಠ. ಈ ಕಾರ್ಯಕ್ರಮದಿಂದಾಗಿ ಸ್ವಾತಂತ್ರ್ಯ ದಿನಾಚರಣೆಗೊಂದು ಅರ್ಥ ಬಂದಂತಾಗಿದೆ. ಇದಕ್ಕಾಗಿ ಜನಶಕ್ತಿ ವೇದಿಕೆಯ ಮಾಧವ ನಾಯಕ ಅವರಿಗೆ ಧನ್ಯವಾದ ತಿಳಿಸುತ್ತೇನೆ. ತೆರೆಮರೆಯ ಸೇವಕರನ್ನು ಅವರು ಗುರುತಿಸಿ, ಅವರನ್ನು ಮುನ್ನೆಲೆಗೆ ತರುವ ಕಾರ್ಯವನ್ನು ಯಾವುದೇ ಫಲಪೇಕ್ಷೆ ಇಲ್ಲದೆ ಮಾಡುತ್ತಿರುವ ಅವರು, ತಮ್ಮ ಸೇವೆಯನ್ನು ಇನ್ನೂ ಮುಂದುವರಿಸಲಿ ಎಂದು ಹಾರೈಸಿದರು.
ಭಾರತೀಯ ಸೇನೆಯಲ್ಲಿ ಭಾರತೀಯರಿಗಾಗಿ ಸೇವೆ ಸಲ್ಲಿಸಿದ್ದ ಕಶ್ಮೀರ್ ಫಿಲಿಪ್ ಅವರ ಸೇವೆ ಶ್ಲಾಘನೀಯ. ಕಾರವಾರಿಗರು ಎಂದಿಗೂ ಇಂಥವರನ್ನ ಸ್ಮರಿಸಬೇಕು. ಸ್ವಾತಂತ್ರ‍್ಯ ದಿನಾಚರಣೆಯೆಂದರೆ ಸ್ವಾತಂತ್ರ‍್ಯಕ್ಕಾಗಿ- ಸೌಹಾರ್ದ ಭಾರತಕ್ಕಾಗಿ ಹೋರಾಡಿದವರನ್ನ ನೆನೆಯುವುದೇ ಆಗಿದೆ ಎಂದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಪ್ರಮುಖರಾದ ರಾಜೀವ ನಾಯ್ಕ, ಸಿ.ಎನ್.ನಾಯ್ಕ, ಸುರೇಶ ನಾಯ್ಕ, ಕಾಶೀನಾಥ್ ನಾಯ್ಕ, ಖೈರುನ್ನಿಸಾ ಶೇಖ್, ಸೂರಜ್ ಕುರುಮಕರ್, ಮದರ್ ಥೆರೆಸಾ ಸಂಸ್ಥೆಯ ಸಿರಿಲ್ ಗೊನ್ಸಾಲಿಸ್, ಐರಿನ್ ಗೊನ್ಸಾಲಿಸ್, ಸ್ಯಾಮ್ಸನ್ ಡಿಸೋಜಾ, ಕಶ್ಮೀರ್ ಅವರ ಪುತ್ರಿ ರೋಸೆಡಾ, ಅಳಿಯ ಡೆರೆಲ್, ಮೊಮ್ಮಕ್ಕಳಾದ ಡೆಲ್ಸಿಯಾ, ಎನಾಕ್ ಮುಂತಾದವರಿದ್ದರು.

ಕೋಟ್…
ಸ್ವಾತಂತ್ರ್ಯ ದಿನಾಚರಣೆಯೆಂದರೆ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಳ್ಳಲು ತಮ್ಮನ್ನು ಅರ್ಪಿಸಿಕೊಂಡವರನ್ನು ನೆನೆಯುವ ದಿನ. ಅಲ್ಲದೇ ಈ ಬಾರಿ ನಾವೆಲ್ಲ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಇಷ್ಟು ನಿರ್ಭೀತಿಯಿಂದ, ಸ್ವತಂತ್ರರಾಗಿ ನಾವು ದೇಶದೊಳಗೆ ಜೀವಿಸಲು ದೇಶದ ಗಡಿಯಲ್ಲಿನ ಸೈನಿಕರು ಕಾರಣ. ಅಂಥವರಲ್ಲಿ ಓರ್ವರಾಗಿದ್ದ ಕಶ್ಮೀರ್ ಅವರನ್ನು ಕಾರವಾರಿಗರು ಎಂದಿಗೂ ಮರೆಯಬಾರದು. ಇಂಥವರೇ ಯುವಜನಾಂಗಕ್ಕೆ ಸ್ಫೂರ್ತಿ.
• ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

300x250 AD
Share This
300x250 AD
300x250 AD
300x250 AD
Back to top