Slide
Slide
Slide
previous arrow
next arrow

ಅಜಿತ ಮನೋಚೇತನಾ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

300x250 AD

ಶಿರಸಿ: ಮರಾಠಿಕೊಪ್ಪದ ಸುಭಾಷ ನಗರದಲ್ಲಿರುವ ಅಜಿತ ಮನೋಚೇತನಾ ಟ್ರಸ್ಟ್ (ರಿ) ಇವರು ನಡೆಸುತ್ತಿರುವ ವಿಕಾಸ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣದ ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷರಾದ ಸುಧೀರ್ ಭಟ್‌ ಇವರು ನಡೆಸಿಕೊಟ್ಟರು. ಧ್ವಜಾರೋಹಣದ ನಂತರ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ರಾಷ್ಟ್ರಗೀತೆಯನ್ನು ಹಾಗೂ ದೇಶ ಭಕ್ತಿಗೀತೆಗಳನ್ನು ಹಾಡಿದರು. ಧ್ವಜಾರೋಹಣವನ್ನು ನೆಡೆಸಿಕೊಟ್ಟ ಸುಧೀರ ಭಟ್‌ರವರು ಮಾತಾನಾಡುತ್ತಾ, ಇಂದು ನಾವು ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. 76ನೇ ವರ್ಷಕ್ಕೆ ಕಾಲಿಟ್ಟಿರುತ್ತೇವೆ.
ಅನೇಕ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಮಾಡಿ ನಮಗೆ ಹಿರಿತನದಿಂದ ಸ್ವಾತಂತ್ರ್ಯ ತಂದುಕೊಟ್ಟರು. ಅದನ್ನು ನಾವು ಸ್ವೇಚ್ಛಾಚಾರವಾಗಿ ಬಳಸುತ್ತಿದ್ದೇವೆ. ನಮ್ಮಆತ್ಮಾವಲೋಕನ ಮಾಡಿಕೊಂಡು ಈ ಸ್ವಾತಂತ್ರ್ಯಕ್ಕೆ ಚ್ಯುತಿಬಾರದAತೆ ನಾವು ಆತ್ಮನಿರ್ಭರರಾಗಿ ಕೆಲಸ ಮಾಡಬೇಕು. ಈಗಾಗಲೇ ನಾವು ಜಗತ್ತಿನಾದ್ಯಂತ ಗುರುತಿಸಿಕೊಂಡಿದ್ದೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಪ್ರತಿಯೊಂದು ಕ್ಷೇತ್ರಗಳಲ್ಲಿ ಮುಂದುವರೆದಿದ್ದೇವೆ.ಆAತರಿಕವಾಗಿ ನಮ್ಮ ದೇಶದಲ್ಲಿ ಆತ್ಮನಿರ್ಭರರಾಗಿ ಬದುಕಬೇಕು.ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶ ಇತರೆ ಮುಂದುವರಿದ ದೇಶಗಳಿಗೂ ಕೂಡ ಕೋವಿಡ್ ವ್ಯಾಕ್ಸಿನೇಶನ ವಿತರಿಸುವಲ್ಲಿ ಮುಂದಿದೆ ಎಂಬುದು ಹೆಮ್ಮೆಯ ಸಂಗತಿ ಇದು ನಮ್ಮಆತ್ಮ ಬಲವಾಗಿದೆ ಎಂದರು ಹಾಗೂ ಬಂದAತಹ ಎಲ್ಲಾ ಅತಿಥಿಗಳಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಕರ ವೃಂದದವರಿಗೆ ಶುಭಕೋರಿದರು.
ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿ ಸಂಘ(ರಿ) ಶಿರಸಿ ಘಟಕದ ಜಿಲ್ಲಾ ಕಾರ್ಯದರ್ಶಿಗಳಾದ ರಮೇಶ ನಾಯ್ಕ ಮಾತಾನಾಡುತ್ತಾ ಸ್ವಾತಂತ್ರ್ಯದ 75 ನೇ ವರ್ಷ ಭಾರತಕ್ಕೆ ಅಮೃತಘಳಿಗೆಯಾಗಿದೆ. ದೇಶ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ ಜೊತೆಗೆ ಮಾನವೀಯತೆಯಲ್ಲಿಅಭಿವೃದ್ಧಿ ಹೊಂದಬೇಕು. ಎಲ್ಲ ಸಂಘ ಸಂಸ್ಥೆಗಳಿಗೂ ಆರೋಗ್ಯ ಭಾಗ್ಯದೇವರುಕೊಡಲಿ ಎಂದು ಕೇಳಿಕೊಂಡರು. ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರರನ್ನು ಹುರಿದುಂಬಿಸಿದರು.
ನಂತರ ವಿಶೇಷ ಮಕ್ಕಳಿಂದ ಪಥ ಸಂಚಲನ ನಡೆಯಿತು. ಮಕ್ಕಳು ಭಾಷಣ,ದೇಶ ಭಕ್ತಿಗೀತೆ ಹಾಗೂ ಛದ್ಮವೇಶ ಕಾರ್ಯಕ್ರಮದಲ್ಲಿ ಭಾರತಾಂಬೆ, ಮಹಾತ್ಮಗಾಂಧೀಜಿ, ಸ್ವಾಮಿ ವಿವೇಕಾನಂದ, ಕಿತ್ತೂರುರಾಣಿಚೆನ್ನಮ್ಮ, ಸೈನಿಕ,ಆರಕ್ಷಕ, ರೈತಮುಂತಾದ ವೇಷತೊಟ್ಟು ಸಂತೋಷದಿAದ ಭಾಗವಹಿಸಿದರು
ಈ ಶುಭ ಸಂದರ್ಭದಲ್ಲಿ ಅರ್ಬನ್ ಬ್ಯಾಂಕ್‌ನ ಅಧ್ಯಕ್ಷರಾದ ಜಯದೇವ ನಿಲೇಕಣಿ, ನಿತಿನ್‌ ಕಾಸರಕೋಡ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿ ಸಂಘ(ರಿ) ಶಿರಸಿ ಘಟಕದ ಜಿಲ್ಲಾ ಕಾರ್ಯದರ್ಶಿ ರಮೇಶ ನಾಯ್ಕ ,ಜಿಲ್ಲಾಧ್ಯಕ್ಷರಾದ ಪ್ರವೀಣ ಪುಳಕರ,ಖಜಾಂಚಿ ನಿತಿನ್ ಪಲೇಕರ, ಹಿರಿಯ ಪ್ರತಿನಿಧಿಗಳಾದ ಎಮ್ ಮಧುಕರ, ಆರ್.ಕೆ ಹೆಗಡೆ ಸಂತೋಷ ನವಿಲಗೋಣಇತರ ವೈದ್ಯಕೀಯ ಪ್ರತಿನಿಧಿಗಳು, ಪಾಲಕರು ಉಪಸ್ಥಿತರಿದ್ದರು.
ಕೃಷ್ಣಮೂರ್ತಿ ಜೆಮ್ ಬೇಕರ್ಸ್ ಶಿರಸಿ ಇವರು ಸಿಹಿಯನ್ನು ಹಾಗೂ ಔಷಧ ಕಂಪನಿಗಳ ಪ್ರತಿನಿಧಿಗಳ ತಂಡದವರುಲಘು ಉಪಹಾರ ಮತ್ತು ಮಕ್ಕಳಿಗೆ ಪಟ್ಟಿಗಳನ್ನು ವಿತರಣೆ ಮಾಡಿ ಶುಭಕೋರಿದರು.ಶಾಲೆಯ ಶಿಕ್ಷಕವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದರು.ಶಿಕ್ಷಕಿ ಕು. ಸುಮಿತ್ರ ಮರಾಠಿ ನಿರೂಪಣೆ ಮಾಡಿದರು, ಶಿಕ್ಷಕಿ ಶ್ರೀಮತಿ ಪರಿಮಳ ಸಂತೋಷ ವಂದನಾರ್ಪಣೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top