ಶಿರಸಿ ಲಯನ್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ 75 ನೇ ಸ್ವಾತಂತ್ರ‍್ಯ ದಿನದ ಅಮೃತ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ 8 ಗಂಟೆಗೆ ಸರಿಯಾಗಿ ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ವರ್ಷದ ಅದ್ಯಕ್ಷರು, ಲಯನ್ಸ್ ಶಿಕ್ಷಣ ಸಂಸ್ಥೆಯ ಪೂರ್ವ ಅಧ್ಯಕ್ಷರಾದ ಎಂ.ಜೆ.ಎಫ್.ಲಯನ್.ತ್ರಿವಿಕ್ರಮ ಪಟವರ್ಧನರವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವು ನೆರವೇರಿತು. ಈ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಲಯನ್. ತ್ರಿವಿಕ್ರಮ ಪಟವರ್ಧನರವರು ಮಕ್ಕಳಲ್ಲಿ ದೇಶಕ್ಕೆ ಕೀರ್ತಿ ತಂದ ಮಹಾನ್ ವ್ಯಕ್ತಿಗಳನ್ನು ನೊಡಬಯಸುತ್ತೇವೆ. ವೀರರ, ತ್ಯಾಗಿಗಳ ಮೇರುವ್ಯಕ್ತಿಗಳ ಹಾಗೆ ಜನಸಾಮಾನ್ಯರು ಕೂಡ ನಮ್ಮ ದೇಶವನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡಬೇಕು, ಸ್ವಾತಂತ್ರ್ಯದ ಅರ್ಥ ನಾವು ಕೂಡ ಮೆಲುಕು ಹಾಕಬೇಕು ಎಂದು ಹೇಳಿದರು.
ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊ. ರವಿ ನಾಯಕ್ ಆಜಾದಿ ಕಾ ಅಮೃತ ಮಹೋತ್ಸವದ ಪ್ರಾಮುಖ್ಯತೆಯನ್ನು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು. ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ವಂದಿಸಿದರು.ಸಹಶಿಕ್ಷಕಿ ಶ್ರೀಮತಿ ಮುಕ್ತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಕರಾದ ನಾಗರಾಜ್ ಜೋಗಳೆಕರ್, ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಚೇತನ ಪಾವಸ್ಕರ್, ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರ್ ಸಂಗೀತ ಶಿಕ್ಷಕಿಯವರಾದ ಶ್ರೀಮತಿ ದೀಪಾ ಶಶಾಂಕ ಹೆಗಡೆ ಧ್ವಜಾರೋಹಣ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದರು.ಕಾರ್ಯಕ್ರಮದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲ. ಎನ್.ವಿ.ಜಿ.ಭಟ್, ಉಪಾಧ್ಯಕ್ಷರಾದ ಎಂ.ಜೆ.ಎಫ್ ಲಯನ್ ಪ್ರಭಾಕರ ಹೆಗಡೆ,ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ರಮಾ ಪಟವರ್ಧನ,ಲಯನ್ಸ ರೀಜನಲ್ ಚೇರ್ ಪರ್ಸನ್ ಎಂ.ಜೆ.ಎಫ್.ಲಯನ್ ಜ್ಯೋತಿ ಭಟ್ ಹಾಗೂ ಲಯನ್ಸ್ ಕ್ಲಬ್ ಶಿರಸಿ ಹಾಗೂ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸ್ಕೌಟ್ ಮತ್ತು ಗೈಡ್ಸ್ ವಿಭಾಗದ ವಿದ್ಯಾರ್ಥಿಗಳ ಪಥಸಂಚಲನ, ಬ್ಯಾಂಡ್ ಸೆಟ್ ವಾದ್ಯಗಳು, ದೇಶಭಕ್ತಿಗೀತೆಗಳ ಗಾಯನ ತಂಡ ವಿಶೇಷ ಮೆರಗನ್ನು ತಂದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಪಾಲಕ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಸಿಹಿ ವಿತರಿಸಲಾಯಿತು.