• Slide
  Slide
  Slide
  previous arrow
  next arrow
 • ನಾವು ನಮ್ಮಿಷ್ಟ ಗ್ರುಪ್’ನಿಂದ ಧನ್ಯಾ ಹೆಗಡೆಗೆ ಸನ್ಮಾನ

  300x250 AD

  ಶಿರಸಿ:ನಗರದ ಹೋಟೆಲ್ ಅಪೋಲೋ ಇಂಟರ್ನಾಷನಲ್ ಸಭಾಭವನದಲ್ಲಿ ಫೇಸ್ ಬುಕ್’ನಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ನಾವು ನಮ್ಮಿಷ್ಟ ಗ್ರೂಪ್’ನಿಂದ ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾದ ಕು.ಧನ್ಯಾ ಹೆಗಡೆ ಇವಳನ್ನು ಶಾಲು ಹೊದಿಸಿ ಫಲ ತಾಂಬೂಲ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.

  ಸಿದ್ದಾಪುರ ತಾಲೂಕಿನ ಸರಕುಳಿ ಜಗದಂಬಾ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಧನ್ಯಾ ಹೆಗಡೆ ಹಿಂದಿಯಲ್ಲಿ ಏಳು ಎಲೆಗಳ ಮೇಲೆ ಬರೆದ ರಾಷ್ಟ್ರಗೀತೆ ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿತ್ತು. ಕೃಷಿ ಕುಟುಂಬದ ಯುವ ಪ್ರತಿಭೆ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ.

  300x250 AD

  ನಾವು ನಮ್ಮಿಷ್ಟ ಗ್ರೂಪ್’ನ ಎಡ್ಮಿನ್ ಬಳಗದ ಸೂರ್ಯನಾರಾಯಣ ಹೆಗಡೆ ಕಡತೋಕ,ಶ್ರೀಮತಿ ಸಾವಿತ್ರಿ ರಮೇಶ ಹೆಗಡೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು . ವೇದಿಕೆಯಲ್ಲಿ ವಿನಾಯಕ ಹೆಗಡೆ ಮುಂಡಿಗೇಸರ,ಚಂದ್ರಣ್ಣ ಹಾಗೂ ಧನ್ಯಾಳ ಪಾಲಕರಾದ ಶ್ರೀಮತಿ ಸವಿತಾ ಹಾಗೂ ಕೃಷ್ಣ ದಂಪತಿಗಳು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಇದೆ ಸಂದರ್ಭದಲ್ಲಿ ಇತ್ತೀಚಿಗೆ ಅಗಲಿದ ಗ್ರೂಪ್ ಸದಸ್ಯರಾದ ವಿನಾಯಕ ಬ್ರಹ್ಮೂರ್,ಪ್ರಸನ್ನ ಭಟ್ ಕೊಡಬೈಲ್,ನಾರಾಯಣ ಹೆಗಡೆಯವರ ದಿವ್ಯಾತ್ಮಕ್ಕೆ ಶಾಂತಿ ಕೋರಿ ಶೃದ್ಧಾಂಜಲಿ ಸಲ್ಲಿಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top