Slide
Slide
Slide
previous arrow
next arrow

ಅತಿಕ್ರಮಣದಾರರ ಕಾರ್ಯಾಲಯದಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವ ಆಚರಣೆ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಮಾಡುವ ಜೊತೆಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಿತು.

 ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜರುಗಿದ ಧ್ವಜಾರೋಹಣವನ್ನ ಅಧ್ಯಕ್ಷ ರವೀಂದ್ರ ನಾಯ್ಕ ಧ್ವಜಾರೋಹಣ ಮಾಡಿ ಅರಣ್ಯ ಅತಿಕ್ರಮಣದಾರರ ಕುಟುಂಬದವಳಾಗಿ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಂತಹ ದೀಕ್ಷಾ ರಾಜು ನಾಯ್ಕ ಹಾಗೂ ಶಿರಸಿ ಪತ್ರಕರ್ತ ಸಂಘದಿಂದ ಮಾಧ್ಯಮ ಶ್ರೀ ಪ್ರಶಸ್ತಿ ವಿಜೇತ ಪ್ರದೀಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

 ಪುರಸ್ಕೃತರಾದ  ಪತ್ರಕರ್ತ ಪ್ರದೀಪ ಶೆಟ್ಟಿ  ಮಾತನಾಡುತ್ತಾ, ಅರಣ್ಯ ಭೂಮಿ ಸಮಸ್ಯೆ ಸ್ಪಂದಿಸಿದ ಹೋರಾಟವು ತಾತ್ವಿಕ ಹಂತಕ್ಕೆ ಬಂದಿದ್ದು, ಹಕ್ಕಿಗಾಗಿ ಪರಿಣಾಮಕಾರಿಯಾದ ಸಂಘಟನೆಗೊಳ್ಳಬೇಕು.  ಹಕ್ಕಿಗಾಗಿ ಹೋರಾಟವು ಸಾಮಾಜಿಕ ನ್ಯಾಯದ ಪ್ರತೀಕವಾಗಿದೆ ಎಂದರು. ಸನ್ಮಾನಿಸಲ್ಪಟ್ಟ ದೀಕ್ಷಾ ನಾಯ್ಕ ಮಾತನಾಡುತ್ತಾ ಪ್ರೋತ್ಸಾಹ ಮತ್ತು ಸನ್ಮಾನ ಸಾಧಕರಿಗೆ ಹೇಚ್ಚಿನ ಯಶಸ್ಸು ಗೊಳಿಸಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು.

300x250 AD

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಸತೀಶ್ ನಾಯ್ಕ ಮಧರಳ್ಳಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ವಿಶೇಷ ಆಮಂತ್ರಿತರಾಗಿ ರಾಜ್ಯ ಮೀನುಗಾರರ ಸಂಘಟನೆಯ ಹಿರಿಯ ಧುರೀಣ ರಾಜು ಉಗ್ರಾಣಕರ ಆಗಮಿಸಿದ್ದರು. ಸಭೆಯಲ್ಲಿ  ಶಿರಸಿ ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳ್ಳಕನವರ, ಜಿಲ್ಲಾ ಸಂಚಾಲಕ ಶೇಖಯ್ಯ ಹಿರೇಮಠ ಮುಂಡಗೋಡ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಯಲ್ಲಪ್ಪಾ ಜಿನ್ನೂರ, ದುರ್ಗಪ್ಪ ಭಜಂತ್ರಿ, ಈಶ್ವರ ಗೌಡ, ರುಸ್ತುಂ ಸಾಬ ಇಮಾಮಸಾಬ ಅಚನವರ, ರಾಮಣ್ಣ ಜೋಗಿ, ಮುಂತಾದವರು ಉಪಸ್ಥಿತರಿದ್ದರು.

ಅತಿಕ್ರಮಣದಾರರಿಗೆ ಸ್ವತಂತ್ರತೆಯಿಲ್ಲ : ಸ್ವತಂತ್ರ ಸಿಕ್ಕಿ 75 ವರ್ಷಗಳಾದರೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕಿನಿಂದ ವಂಚಿತರಾಗಿ ನಿರಂತರ ಅರಣ್ಯ ಅಧಿಕಾರಿಗಳ ಕಿರುಕುಳ ಮತ್ತು ದೌರ್ಜನ್ಯದಿಂದ ಆತಂಕದಲ್ಲಿ ಜೀವನ ನಡೆಸುತ್ತಿರುವ ಅರಣ್ಯ ಅತಿಕ್ರಮಣದಾರರ ಜೀವನಕ್ಕೆ ಸ್ವತಂತ್ರತೆ ಇಲ್ಲದಂತಾಗಿದೆ, ಭೂಮಿ ಹಕ್ಕಿಗಾಗಿ 31 ವರ್ಷ ದೀರ್ಘ ಹೋರಾಟ ಜರುಗಿಸಿದರೂ ಸರಕಾರ ಸ್ಪಂದಿಸದೇ ಇರುವುದಕ್ಕೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸ್ವತಂತ್ರೋತ್ಸವದ ದಿನದ ಪ್ರಧಾನ ಭಾಷಣದಲ್ಲಿ ವಿಷಾದ ವ್ಯಕ್ತಪಡಿಸಿದರು.

Share This
300x250 AD
300x250 AD
300x250 AD
Back to top