ಕಾರವಾರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನ ಬೇಲೆಕೇರಿಯಲ್ಲಿ ಜರುಗಿತು.
ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಆಯೋಜಿಸಿದ್ದ ‘ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸೋಣ ರಾಷ್ಟ್ರಭಕ್ತಿ ಮೆರೆಯೋಣ’ ಘೋಷಣೆಯೊಂದಿಗೆ ತ್ರಿವರ್ಣ ಧ್ವಜದ ಜಾಥಾ ಊರಿನಲ್ಲಿ ಸಂಚರಿಸಿತು. ಈ ಜಾಥಾದಲ್ಲಿ ಸ್ಥಳೀಯ ಶ್ರೀ ವಿವೇಕ ಸೌಹಾರ್ದ ಸಹಕಾರಿಯ ಕೇಶವಾನಂದ ನಾಯಕ ಮತ್ತು ನಿರ್ಮಲಾ ನಾಯಕ ದಂಪತಿ, ಬೇಲೆಕೇರಿ ಸರಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಕಲ್ಪನಾ ನಾಯಕ ಮತ್ತು ಶಿಕ್ಷಕ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಬ್ಯಾಂಡ್ ವಾದ್ಯದೊಂದಿಗೆ ಪಥ ಸಂಚಲನದಲ್ಲಿ ಭಾಗವಹಿಸಿ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಿದರು. ಭಾರತೀಯ ನೌಕಾಸೇನೆಯ ಕೋಸ್ಟಲ್‌ಗಾರ್ಡ್ ಅಧಿಕಾರಿಗಳು ಸ್ಥಳೀಯ, ಸಂಘ ಸಂಸ್ಥೆಗಳು ಅಭಿಯಾನದಲ್ಲಿ ಪಾಲ್ಗೊಂಡವು.
ನಂತರ ಸಭೆಯಾಗಿ ಮಾರ್ಪಟ್ಟ ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಂಕೋಲಾ ಸಿಟಿಯ ಅಧ್ಯಕ್ಷೆ ಜಯಶ್ರೀ ಶೆಟ್ಟಿ, ಶ್ರೀ ವಿವೇಕ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಕೇಶವಾನಂದ ನಾಯಕ, ದಿನಕರ ವೇದಿಕೆಯ ಕಾರ್ಯಾಧ್ಯಕ್ಷ ಸಂತೋಷ ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿ ನಯನಾ ಶೇಟ್, ಖಜಾಂಚಿ ನೀತಾ ಮಹಾಲೆ, ಅಭಿಯಾನದಲ್ಲಿ ಶಶಿಧರ ಶೇಣ್ವಿ, ಸಹನಾ ಶೇಣ್ವಿ, ಡಾ.ವಿಜಯದೀಪ, ರೋಶನಾ, ಮೋಹನ ಶೆಟ್ಟಿ, ಜಯಲಕ್ಷಿö್ಮ ಶೆಟ್ಟಿ, ಅರುಣ ಶೇಟ್, ಚಾರ್ಟರ್ ಅಧ್ಯಕ್ಷ ಕಮಲಾಕರ ಬೋರಕರ, ಉದಯಾನಂದ ಎನ್., ಪ್ರಶಾಂತ ಶೆಟ್ಟಿ, ಮಾಯಾ ಶೆಟ್ಟಿ ಹಾಜರಿದ್ದರು. ನಾರಾಯಣ ಎಚ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ಅಭಿಯಾನ ಯಶಸ್ವಿಗೆ ನೆರವಾದ ಸರ್ವರ ಉಪಕಾರ ಸ್ಮರಿಸಿದರು.
ಶಾಲಾ ಮಕ್ಕಳಿಗೆ ಅಂಕೋಲಾ ಸಿಟಿ ಲಯನ್ಸ್ ವತಿಯಿಂದ ಸಿಹಿತಿಂಡಿ ಮತ್ತು ಪೆನ್ನು ವಿತರಿಸಿದರು. ಸ್ಥಳೀಯ ನಾಗರಿಕರಾದ ಜಿಲ್ಲಾ ಪಂಚಾಯತದ ರಾಮಚಂದ್ರ ನಾಯಕ, ಸಂತೋಷ ಶೇಣ್ವಿ, ಎಂ.ಎಂ.ಎಲ್‌ನ ತಿಮ್ಮಣ್ಣ ನಾಯಕ, ಹಮ್ಮಣ್ಣ ನಾಯಕ, ಜೈವಂತ ಮಿಟಗಾಂವಕರ ಭಾಗವಹಿಸಿದರು.