ಶಿರಸಿ: ಲಯನ್ಸ ಶಾಲೆಯಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರತೀ ಮನೆಗೂ ರಾಷ್ಟ್ರಧ್ವಜ ಅಭಿಯಾನದ ಅಂಗವಾಗಿ ಜಾಗೃತಿ ರ‍್ಯಾಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶಿರಸಿ ಲಯನ್ಸ ಶಾಲೆಯ ಸ್ಕೌಟ್ ಹಾಗೂ ಗೈಡ್ ತಂಡ, ಲಿಯೋ ಕ್ಲಬ್ ಶಿರಸಿ , ಶಾಲೆಯ ಸಮವಸ್ತ್ರ ತಂಡ ಶಿಸ್ತು ಬದ್ಧ ಪಥಸಂಚನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಫಲವಾಯಿತು. ಶಿರಸಿ ಲಯನ್ಸ ಶಾಲಾ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ರ‍್ಯಾಲಿಗೆ ಚಾಲನೆ ನೀಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ ಘೋಷಣೆಗಳಿಗೆ ಶಾಲಾ ಮಕ್ಕಳು ದನಿಗೂಡಿಸಿದರು.
ಲಿಯೋ ಕ್ಲಬ್ ಮಾರ್ಗದರ್ಶಕರಾದ ಲಯನ್ ಅಶ್ವತ್ಥ ಹೆಗಡೆ ಮಕ್ಕಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ದೇಶಭಕ್ತಿ ಗೀತೆಗಳನ್ನು ಹಾಡುತ್ತ, ವಿವಿಧ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಶಿರಸಿಯ ಲಯನ್ಸ ನಗರ, ಯಲ್ಲಾಪುರ ರಸ್ತೆ, ವಿದ್ಯಾನಗರ, ಮರಾಠಿಕೊಪ್ಪ, ವಿಶಾಲ ನಗರ ಭಾಗಗಳಲ್ಲಿ ಸಂಚರಿಸಿದರು. ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ ಜೋಗಳೇಕರ್, ಶ್ರೀಮತಿ ಚೇತನಾ ಪಾವಸ್ಕರ ಮಾರ್ಗದರ್ಶನದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಯಾಗಿ ಜರುಗಿತು.