• Slide
    Slide
    Slide
    previous arrow
    next arrow
  • ಟಿ.ಎಸ್.ಎಸ್’ನಿಂದ ಆಕರ್ಷಕ ಲಕ್ಕಿಡಿಪ್ ಕೂಪನ್

    300x250 AD

    ಶಿರಸಿ: ತೋಟಗಾರ್ಸ್ ಕೋ-ಒಪರೇಟಿವ್ ಸೇಲ್ ಸೊಸೈಟಿ ಕೃಷಿ ವಿಭಾಗದಲ್ಲಿನ ಟಿ.ಎಸ್.ಎಸ್. ಗ್ರೀನ್‌ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಹಾಗೂ ಟಿ.ಎಸ್.ಎಸ್. ಕೃಷಿ ಮಿತ್ರ ಗೊಬ್ಬರಗಳ ಪ್ರತಿ 2 ಚೀಲ ಖರೀದಿ ಮೇಲೆ 1 ಕೂಪನ್ ನೀಡಲಾಗುವುದು.ಈ ಕೂಪನ್‌ಗಳು ದಿನಾಂಕ 15/08/2022 ರಿಂದ 31/12/2022ರ ವರೆಗಿನ ಖರೀದಿಗೆ ಅನ್ವಯವಾಗುತ್ತದೆ.

    ಲಕ್ಕಿ ಡಿಪ್ ವಿಜೇತರಿಗೆ ಬಹುಮಾನವಾಗಿ ಒಂದು ಇಲೆಕ್ಟ್ರಿಕ್ ಬೈಕ್,ಒಂದು ಸುಪ್ರೀಮ್ ಸೋಫಾ ಸೆಟ್, ಒಂದು 32” ಎಲ್.ಇ.ಡಿ.ಟಿ.ವಿ.,ಒಂದು ಮಥನಾ ಮೂರುಗಾಲಿ ಕೃಷಿ ಟ್ರಾಲಿ, ಐದು ಟಿ.ಎಸ್.ಎಸ್. ಬ್ಯಾಟರಿ ಸ್ಪ್ರೇಯರ್, ಐದು 1 ಗ್ರಾಂ ಚಿನ್ನದ ನಾಣ್ಯಗಳು ಹಾಗೂ 100 ಸ್ಟೀಲ್ ಪ್ಲೇಟ್ಸ್ ನೀಡಲಾಗುವುದು. ಲಕ್ಕಿ ಡಿಪ್ ಮೂಲಕ ಅದೃಷ್ಟಶಾಲಿಗಳ ಆಯ್ಕೆಯನ್ನು ಜನವರಿ 2023ರಲ್ಲಿ ನಡೆಸಲಾಗುವುದು. ಲಕ್ಕಿ ಡಿಪ್‌ ಕೂಪನ್ ತೋರಿಸಿದರೆ ಟಿ.ಎಸ್.ಎಸ್. ಟ್ರೈಕೋಡರ್ಮಾ, ಸುಡೊಮೊನಾಸ್ ಮತ್ತು ಲಘು ಪೋಷಕಾಂಶಗಳ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಹಾಗೂ ಖಚಿತ ಉಡುಗೊರೆಯಾಗಿ ಈ ಮೇಲಿನ ಯಾವುದೇ 20 ಚೀಲ ಖರೀದಿಗೆ 1 ಟೀ ಶರ್ಟ್ ಉಚಿತವಾಗಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top