Slide
Slide
Slide
previous arrow
next arrow

ಬಿಜೆಪಿ ಸರ್ಕಾರದಿಂದ ರಾಷ್ಟ್ರಧ್ವಜಕ್ಕೆ ಅಗೌರವ ತಂದಂತಾಗಿದೆ: ವಸಂತ ನಾಯ್ಕ

300x250 AD

ಸಿದ್ದಾಪುರ: ತಾಲೂಕಿನ ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರ ಕಳಪೆ ಮಟ್ಟದ ರಾಷ್ಟ್ರಧ್ವಜವನ್ನು ನೀಡುತ್ತಿದೆ. ಧ್ವಜ ಸಂಹಿತೆ ಕಾನೂನು ಪ್ರಕಾರ ಖಾದಿ ಬಟ್ಟೆಯ ಬಾವುಟವನ್ನು ನೀಡಬೇಕಾಗಿತ್ತು. ಆದರೆ ಪಾಲಿಸ್ಟರ್ ಧ್ವಜವನ್ನು ನೀಡಲಾಗಿದೆ. ಅದರಲ್ಲಿ ಧ್ವಜದ ಉದ್ದ- ಅಗಲ ಈ ರೀತಿಯಾದ ಅಳತೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ರಾಷ್ಟ್ರಧ್ವಜದಲ್ಲಿಯೂ ಈ ಬಿಜೆಪಿ ಸರ್ಕಾರ 40% ಕಮಿಷನ್ ಪಡೆದಿರಬೇಕು? ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಎಲ್.ನಾಯ್ಕ ಮನ್ಮನೆ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ್ದು, ಇದು ರಾಷ್ಟ್ರಧ್ವಜಕ್ಕೆ ಅಗೌರವ ತಂದಂತಾಗಿದೆ. ಈ ಅಗೌರವವನ್ನು ತಂದಿಟ್ಟ ಆಡಳಿತ ಸರ್ಕಾರ ಮತ್ತು ಅಧಿಕಾರಗಳನ್ನು ಧಿಕ್ಕರಿಸುತ್ತೇವೆ. ಅಲ್ಲದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಪಂಚಾಯತಿಗಳಲ್ಲಿ ಒಂದೊಂದು ರೀತಿ ಹಣ ವಸೂಲಿ ಮಾಡುತ್ತಿದ್ದಾರೆ, ಕೆಲವೊಂದು ಕಡೆ 25 ರೂ., ಕೆಲವೊಂದು ಕಡೆ 33 ರೂ. ಈ ರೀತಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರವು ರಾಷ್ಟ್ರಧ್ವಜಕ್ಕೆ ಅಗೌರವ ತಂದಿದ್ದಲ್ಲದೇ ಹಣ ವಸೂಲಿಯನ್ನು ಮಾಡಿ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

300x250 AD

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ನೆಮ್ಮದಿಯ ಬದುಕನ್ನು ನೀಡದೆ ಭಾವನಾತ್ಮಕವಾಗಿ ಜನರನ್ನು ಗಂಟೆ- ಜಾಗಟೆ ಹೊಡೆಯಿರಿ, ದೀಪ ಹಚ್ಚಿರಿ, ಮನೆ ಮೇಲೆ ಧ್ವಜ ಹಾರಿಸಿರಿ ಎಂದು ಹೇಳುವ ಮುಖಾಂತರ ಬಡವರ ಬದುಕನ್ನು ಬೀದಿಗೆ ತರುತ್ತಿದ್ದಾರೆ. ಆದ್ದರಿಂದ ಈ ದೇಶದ ಜನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಗಂಡಾಂತರ ಬಂದೊದಗಲಿದೆ. ಈ ಮೂಲಕ ಬ್ಲಾಕ್ ಕಾಂಗ್ರೆಸ್ ಸಮಿತಿಯು ಇದನ್ನು ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top