ಶಿರಸಿ:ನಗರದ ಎಂಇಎಸ್’ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೋಟಿನ್ಸರ ಸಭಾಭವನದಲ್ಲಿ ಸಂಸ್ಥಾಪಕ ಪ್ರಾಚಾರ್ಯ ಎಲ್.ಟಿ. ಶರ್ಮ ಸಂಸ್ಮರಣಾ ಕಾರ್ಯಕ್ರಮವನ್ನು ಆ.13 ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ. ಎಂಇಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪರಿಸರ ವಿಜ್ಞಾನಿ ಕೇಶವ ಕೊರ್ಸೆ ಆಗಮಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಕೆ ವಿ ಭಟ್ ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರದ ಡಾ ಟಿ ಎಸ್ ಹಳೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.13ಕ್ಕೆ ಎಲ್.ಟಿ. ಶರ್ಮ ಸಂಸ್ಮರಣಾ ಕಾರ್ಯಕ್ರಮ
